
ಮೈಸೂರು
ಯಾವುದೇ ದುಷ್ಟ ಶಕ್ತಿ ಎದುರಾದರೂ ಗೆದ್ದು ಬರುವ ಸಾಮರ್ಥ್ಯ ಕೆಂಪೇಗೌಡರು ಹೊಂದಿದ್ದರು : ಸುನಿತಾ ಜಯರಾಮೇಗೌಡ
ಮೈಸೂರು,ಜು.18:- ನಾಡಪ್ರಭು ಕೆಂಪೇಗೌಡರು ಐದು ಶತಮಾನಗಳ ಹಿಂದಿನ ರಾಜಾಳ್ವಿಕೆಯಲ್ಲಿ ದೂರ ದೃಷ್ಟಿಯಿಂದ ಶಿಕ್ಷಣ, ಜಲ, ನೆಲ, ಹಾಗೂ ಪ್ರಜೆಗಳ ಹಿತಕ್ಕಾಗಿ ತ್ಯಾಗ ಮನೋಭಾವನೆಯಿಂದ ತಮ್ಮನ್ನು ಅರ್ಪಿಸಿಕೊಂಡಿದ್ದರಿಂದಲೇ ಅವರ ಸಾಧನೆ, ಅವರ ನೆನಪು ಇನ್ನೂ ಹಸಿರಾಗಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯ ಸುನಿತಾ ಜಯರಾಮೇಗೌಡ ಅಭಿಪ್ರಾಯಪಟ್ಟರು.
ಹುಣಸೂರು ನಗರದ 9ನೇ ವಾರ್ಡ್ ಚಿಕ್ಕಹುಣಸೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 527 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಂಪೇಗೌಡರು ಉತ್ತಮ ಶಿಕ್ಷಣ, ಅಚಲ ನಿರ್ಧಾರ, ವಾಕ್ ಚಾತುರ್ಯ ಯಾವುದೇ ದುಷ್ಟ ಶಕ್ತಿ ಎದುರಾದರೂ ಗೆದ್ದು ಬರುವ ಸಾಮರ್ಥ್ಯ ಇದ್ದುದ್ದರಿಂದಲೇ ವಿಶ್ವವೇ ಮೆಚ್ಚುವ ಬೆಂಗಳೂರು ಮಹಾನಗರವನ್ನು ನಿರ್ಮಿಸಲು ಸಾಧ್ಯವಾಯಿತು. ಅವರ ವಿಶಾಲ ಚಿಂತನೆಯ ಫಲವೇ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಲು ಸಾಧ್ಯವಾಗಿದ್ದು ಇಲ್ಲದಿದ್ದರೆ ಇಂದಿನ ಸಿಲಿಕಾನ್ ಸಿಟಿ ಒಂದು ಸಾಮಾನ್ಯ ಹಳ್ಳಿಯಾಗೆ ಅಂತ್ಯಗೊಳ್ಳುತಿತ್ತು ಎಂದರು. ನಗರಸಭೆ ಸದಸ್ಯ ಜಿ.ಶ್ರೀನಿವಾಸ್, ನಿವೃತ ಅರಣ್ಯರಕ್ಷಕ ಕೃಷ್ಣೇಗೌಡ, ಡೀಡ್ ಸಂಸ್ಥೆಯ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಚಿಕ್ಕಹುಣಸೂರು ರವಿ, ಶಾರದ ವೆಳಗೆರೆ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)