
ಸುದ್ದಿ ಸಂಕ್ಷಿಪ್ತ
ಜು.19ಕ್ಕೆ ರ್ಯಾಗಿಂಗ್ ಪಿಡುಗು : ಜಾಗೃತಿ ಕಾರ್ಯಕ್ರಮ
ಮೈಸೂರು,ಜು.18 : ಮಹಾರಾಣಿ ಮಹಿಳಾ ಕಾಲೇಜಿನಿಂದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ, ಮಾದಕ ವಸ್ತುಗಳ ಬಳಕೆ ಮತ್ತು ರ್ಯಾಗಿಂಗ್ ಪಿಡುಗು ತಡೆಗಟ್ಟಲು ಜಾಗೃತಿ ಕಾರ್ಯಕ್ರಮವನ್ನು, ಜು.19ರ ಬೆಳಿಗ್ಗೆ 11ಕ್ಕೆ, ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದೆ.
ಪ್ರಾಂಶುಪಾಲ ಡಾ.ಎ.ನಾಗರಾಜು ಅಧ್ಯಕ್ಷತೆ ವಹಿಸುವರು, ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ಪ್ರೊ.ಎ.ಬಾಲಸುಬ್ರಮಣಿಯನ್, ಪ್ರೊ.ಕೆ.ಸಿದ್ದರಾಜು, ಡಾ.ಬಿ.ಯಮುನಾ ಪ್ರೊ.ಡಿ.ಸಂದ್ಯಾರಾಣಿ ಉಪಸ್ಥಿತರಿರುವರು. (ಕೆ.ಎಂ.ಆರ್)