ಮೈಸೂರು

ಭಾರತ ಗುಣಮಟ್ಟದ ಆಹಾರ ತಯಾರಿಸುತ್ತಿದೆ: ಆಹಾರ ನಿರೀಕ್ಷಿತ ಜನತೆಯನ್ನು ತಲುಪುತ್ತಿಲ್ಲ

ಭಾರತವು ಗುಣಮಟ್ಟದ ಆಹಾರವನ್ನು ತಯಾರಿಸುವುದರಲ್ಲಿ ಉನ್ನತಮಟ್ಟದಲ್ಲಿದೆ. ಇಲ್ಲಿ ಉತ್ಪನ್ನವಾಗುವ ಅಕ್ಕಿ, ಗೋಧಿ, ಮೀನು, ಮಾಂಸ ಮತ್ತು ಹಾಲು ಉತ್ತಮ ಗುಣಮಟ್ಟದ್ದಾಗಿದ್ದು, ಸಾಕಷ್ಟು ಜನತೆಯನ್ನು ತಲುಪುತ್ತಿಲ್ಲ. ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಆಹಾರ ವಿಜ್ಞಾನ ಮತ್ತು ಪೌಷ್ಠಿಕಾಂಶ ವಿಭಾಗದ ಪ್ರೊ.ಜಮುನಾ ಪ್ರಕಾಶ್ ಖೇದ ವ್ಯಕ್ತಪಡಿಸಿದರು.

ಮೈಸೂರಿನ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಹವಾಮಾನ ಬದಲಾವಣೆ – ಆಹಾರ ಉತ್ಪಾದನೆ ಮೇಲೆ ಪರಿಣಾಮ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಆರೋಗ್ಯ, ಆಹಾರ ಮನುಷ್ಯ ಜೀವನದ ಅವಿಭಾಜ್ಯ ಅಂಗಗಳಾಗಿದ್ದು, ಪೌಷ್ಠಿಕಾಂಶದ ಕೊರತೆಯನ್ನು ನೀಗಿಸಬೇಕಿದೆ. ದೈಹಿಕ, ಆರ್ಥಿಕ, ಸಾಮಾಜಿಕ, ಕುಡಿಯುವ ನೀರಿನ ರಕ್ಷಣೆ, ಪರಿಸರ, ಶಿಕ್ಷಣ ಎಲ್ಲ ರೀತಿಯಿಂದಲೂ ಸಮತೋಲನವನ್ನು ಕಾಯ್ದುಕೊಳ್ಳಬೇಕಿದೆ ಎಂದರು. ಪೌಷ್ಠಿಕಾಂಶಯುಕ್ತ ಆಹಾರದಲ್ಲಿ ಕೃಷಿಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಜನಸಂಖ್ಯೆ ಬೆಳೆದಂತೆ ಪೌಷ್ಠಿಕಾಂಶಯುಕ್ತ ಆಹಾರ ಜನತೆಯನ್ನು ತಲುಪುತ್ತಿಲ್ಲ. ಭಾರತದಲ್ಲಿ ಶೇಕಡಾ 38.4 ರಷ್ಟು ಮಕ್ಕಳು ಪೌಷ್ಠಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಭಾರತದಲ್ಲಿ ಗುಣಮಟ್ಟದ ಆಹಾರ ಉತ್ಪಾದನೆಯಾಗುತ್ತಿದೆ. ಆದರೆ ನೀರೀಕ್ಷಿತ ಜನತೆಯನ್ನು ತಲುಪುತ್ತಿಲ್ಲ ಎಂದು ತಿಳಿಸಿದರು.

ಯುವರಾಜ ಕಾಲೇಜಿನ ಪ್ರಾಂಶುಪಾಲ ಡಾ. ಹೆಚ್. ನಂಜೇಗೌಡ, ಆಹಾರ ವಿಜ್ಞಾನ ಮತ್ತು ಪೌಷ್ಠಿಕಾಂಶ ಘಟಕದ ಮುಖ್ಯಸ್ಥ ಡಾ. ಶೇಖರ ನಾಯ್ಕ್, ಕೃಷಿವಿಜ್ಞಾನಿ ಡಾ. ವಸಂತಕುಮಾರ್, ಪ್ರೊ. ಡಾ. ಜನಾರ್ದನ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: