ಮೈಸೂರು

ಡಿ.ಐ.ಜಿ ರೂಪಾ ವರ್ಗಾವಣೆ ರದ್ದುಗೊಳಿಸಲು ಆಗ್ರಹ

ಮೈಸೂರು,ಜು.18 : ದಕ್ಷ, ಪ್ರಾಮಾಣಿಕ ಅಧಿಕಾರಿ ಡಿ.ಐ.ಜಿ, ರೂಪಾ ಅವರನ್ನು ಸರ್ಕಾರ ಏಕಾಎಕಿ ವರ್ಗಾವಣೆ ಮಾಡಿರುವುದನ್ನು ಉದ್ದೇಶಿತ ಕರ್ನಾಟಕ ಪ್ರಜಾ ಪಾರ್ಟಿ ತೀಕ್ಷಣವಾಗಿ ಖಂಡಿಸಿದೆ.

ದಿ.ಜಯಲಲಿತಾ ಆಪ್ತೆ ಶಶಿಕಲಾನಿಗೆ ಪರಪ್ಪನ ಅಗ್ರಹಾರ ಕಾರಾಗ್ರಹದ ನೀತಿ ನಿಯಮಗಳನ್ನು ಮೀರಿ, ಐಶಾರಾಮಿ ಜೀವನ ನಡೆಸಲು ಅನುವು ಮಾಡಿಕೊಟ್ಟಿರುವುದನ್ನು ಬಯಲಿಗೆಳೆದ ಪ್ರಾಮಾಣಿಕ ಅಧಿಕಾರಿ ಡಿ.ಐ.ಜಿ ಡಿ.ರೂಪಾರನ್ನು ವರ್ಗಾವಣೆ ಮಾಡಿರುವ ಸರ್ಕಾರ ನಡೆಯನ್ನು ತೀವ್ರವಾಗಿ ಖಂಡಿಸಿರುವ ಪಕ್ಷವು, ರಾಜ್ಯ ಸರ್ಕಾರವು ಪರೋಕ್ಷವಾಗಿ ಭ್ರಷ್ಠಾಚಾರಿಗಳನ್ನು ಸಂರಕ್ಷಿಸುತ್ತದೆ ಎನ್ನುವುದು ಜಗ್ಜಾಹೀರಗೊಳಿಸಿದೆ, ಈ ಕೂಡಲೇ ರೂಪಾರವರ ವರ್ಗಾವಣೆಯನ್ನು ರದ್ದುಗೊಳಿಸಿ ಹಾಗೂ ಪರಪ್ಪನ ಅಗ್ರಹಾರದಲ್ಲಿ ನಡೆದಿರುವ ಕರ್ಮಖಾಂಡವನ್ನು ಸಿಬಿಐ ತನಿಖೆಗೊಳಪಡಿಸಿಬೇಕೆಂದು ಸಂಸ್ಥಾಪಕ ಬಿ.ಶಿವಣ್ಣ, ರಾಜ್ಯ ಸಂಚಾಲಕ ಎಸ್.ಸಿದ್ದೇಗೌಡ ಆಗ್ರಹಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: