ದೇಶಪ್ರಮುಖ ಸುದ್ದಿ

ಪಕ್ಷ ಬಿಡಬೇಕಾಯಿತಲ್ಲ ಎಂದು ಜೋರಾಗಿ ಅತ್ತು ಬಿಟ್ಟರಂತೆ ವೆಂಕಯ್ಯ ನಾಯ್ಡು!

ದೇಶ(ನವದೆಹಲಿ)ಜು.18:- ವೆಂಕಯ್ಯ ನಾಯ್ಡು ಅವರನ್ನು ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಸಿದ ಬಳಿಕ ಉಪರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ಉಪರಾಷ್ಟ್ರಪತಿ ಹುದ್ದೆಗೆ ವೆಂಕಯ್ಯ ನಾಯ್ಡು ಅವರ ಹೆಸರು ಕೇಳಿ ಬರುತ್ತಲೇ ಅವರ ಕಣ್ಣಿಂದ ಕಂಬನಿ ಜಾರಿತ್ತು! ಪಕ್ಷ ಬಿಡಬೇಕಲ್ಲ ಎಂದು ಜೋರಾಗಿ ಅತ್ತುಬಿಟ್ಟರಂತೆ.

ಅವರು ತುಂಬಾ ಭಾವುಕರಾಗಿದ್ದರು. ಪಕ್ಷ ನನ್ನ ತಾಯಿಯಂತೆ ಬಹಳ ವರ್ಷಗಳಿಂದ ಪಕ್ಷದ ಸೇವೆಯಲ್ಲಿಯೇ ತೊಡಗಿಸಿಕೊಂಡಿದ್ದೆ. ಇದರಿಂದ ಪಕ್ಷವನ್ನು ಬಿಡುವುದು ಬಹಳ ಕಷ್ಟವಾಗಿದೆ. ನಾನು ಒಂದೂವರೆ ವರ್ಷದವನಿದ್ದಾಗಲೇ ನನ್ನ ತಾಯಿಯನ್ನು ಕಳೆದುಕೊಂಡೆ. ಅದರ ನಂತರ ಪಕ್ಷ ಸೇರಿದ ಬಳಿಕ ಪಕ್ಷವನ್ನೇ ತಾಯಿ ಎಂದುಕೊಂಡೆ. ಪಕ್ಷ ನನ್ನನ್ನು ಮಗುವಿನಂತೆ ಇಷ್ಟು ಎತ್ತರದವರೆಗೆ ಬೆಳೆಸಿತು. ಪಕ್ಷವನ್ನು ಬಿಡುವುದು ದುಃಖದ ಕ್ಷಣವಾಗಿದೆ. ಇದರಿಂದಲೇ ಸಾಕಷ್ಟು ಭಾವುಕನಾಗಿದ್ದೇನೆ. ಇದೀಗ ಮಂತ್ರಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದೇನೆ. ಈಗ ಒಂದು ಸಾಂವಿಧಾನಿಕ ಹುದ್ದೆಯನ್ನು ನಿರ್ವಹಿಸಲು ಸಿದ್ಧನಿದ್ದೇನೆ. ಈಗ ಬಿಜೆಪಿಯಲ್ಲಿ ನನಗೆ ಏನೂ ಕೊಡು-ಕೊಳ್ಳುವಿಕೆಯಿಲ್ಲ ನ್ಯಾಯ ನೀಡುತ್ತೇನೆ ಎಂಬ ಸದಾಶಯ ನನ್ನದು ಎಂದು ಪ್ರಧಾನಿ ನರೇಂದ್ರ ಮೋದಿಯ ಎದುರೇ ಜೋರಾಗಿ ಅತ್ತುಬಿಟ್ಟರಂತೆ. ಅವರನ್ನು ಸಾಂತ್ವನಿಸಲು ಗಣ್ಯರು ಅವರ ಬಳಿ ತೆರಳಿದ್ದರಂತೆ. (ಎಸ್.ಎಚ್)

Leave a Reply

comments

Related Articles

error: