ಕರ್ನಾಟಕ

ಯಾವುದೇ ಕಾರಣಕ್ಕೂ ವಿಶ್ವ ಕನ್ನಡ ಸಮ್ಮೇಳನ ನಿಲ್ಲಲ್ಲ: ಉಮಾಶ್ರೀ

ಬೆಂಗಳೂರು,ಜು.18-ನವೆಂಬರ್, ಡಿಸೆಂಬರ್ ನಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಲು ತಯಾರಿ ನಡೆದಿದ್ದು, ಯಾವುದೇ ಕಾರಣಕ್ಕೂ ಸಮ್ಮೇಳನ ನಿಲ್ಲಲ್ಲ ಎಂದು ಸಚಿವೆ ಉಮಾಶ್ರೀ ಹೇಳಿದ್ದಾರೆ.

ವಿಶ್ವಕನ್ನಡ ಸಮ್ಮೇಳನ ಪೂರ್ವಬಾವಿ ಸಭೆ ಬಳಿಕ ಮಾತನಾಡಿದ ಅವರು, ಈ ವರ್ಷದ ಕೊನೆಯಲ್ಲಿ ಸಮ್ಮೇಳನ ನಡೆಸಲು ಸರ್ಕಾರ ನಿರ್ಧರಿಸಿದೆ. ಸಾಹಿತಿಗಳು,  ಚಿಂತಕರು ಯಾರು ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದಿದ್ದಾರೆ.

ಕಳೆದ ಸಮ್ಮೇಳನಗಳ ಅತಿಥಿಗಳ ಬಗ್ಗೆ ಹಲವು ಆಕ್ಷೇಪ ವ್ಯಕ್ತವಾಗಿದ್ದವು. ಆದರೆ ಈ ಬಾರಿ ಲೋಪದೋಷ ಸರಿಪಡಿಸುತ್ತೇವೆ. ಕನ್ನಡಪರ ಧ್ವನಿ ಎತ್ತಿರುವವರನ್ನೇ ಅತಿಥಿಗಳಾಗಿ ಆಹ್ವಾನಿಸುತ್ತೇವೆ ಎಂದು ಹೇಳಿದ್ದಾರೆ.

ಇನ್ನೂ ಪ್ರತ್ಯೇಕ ಧ್ವಜದ ಬಗ್ಗೆ ಮಾತನಾಡಿರುವ ಉಮಾಶ್ರೀ, ಪ್ರತ್ಯೇಕ ಕನ್ನಡ ಧ್ವಜಕ್ಕೆ ಕನ್ನಡಿಗರಿಂದ ಬೇಡಿಕೆ ಇತ್ತು. ಹಾಗಾಗಿ ನಾವು ಸಮಿತಿ ರಚಿಸಿದ್ದೇವೆ. ಪ್ರತ್ಯೇಕ ಧ್ವಜ ಎಂದಾಕ್ಷಣ ರಾಷ್ಟ್ರ ದ್ರೋಹ ಅಂತಾ ಬಿಂಬಿಸೋದು ಸರಿಯಲ್ಲ. ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ಅದಕ್ಕಾಗಿ ಸರ್ಕಾರ ಸಮಿತಿ ರಚಿಸಿದೆ. ಸಮಿತಿ ವರದಿ ಬಳಿಕ ಮುಂದೆ ನಿರ್ಧಾರ ಕೈಗೊಳ್ಳುತ್ತೇವೆ ಎಂದರು. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: