ದೇಶಮೈಸೂರು

ಭೌತಶಾಸ್ತ್ರಜ್ಞೆ ಪ್ರೊ. ವಿಜಯಲಕ್ಷ್ಮಿದಯಾಲ್‍ ಅವರಿಗೆ ವಿಜ್ಞಾನ ಮಂತ್ರಾಲಯದ ಪ್ರಶಸ್ತಿ

ಮೈಸೂರು, ಜುಲೈ 19 : ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯವು ಮೈಸೂರಿನ ಮಹಾರಾಜ ಇನ್ಸ್`ಟಿಟ್ಯೂಟ್ ಆಫ್ ಟೆಕ್ನಾಲಜಿಯ ಭೌತಶಾಸ್ತ್ರಜ್ಞೆ ಪ್ರೊ. ವಿಜಯಲಕ್ಷ್ಮಿದಯಾಳ್ ಅವರು ಮಾಡಿರುವ “Study of Strain Mediated Electrical Control over Magnetism in Ferro magnetic/Ferroelectric Hetrostructure” ಶೀರ್ಷಿಕೆಯ ಆಧುನಿಕ ಸಂಶೋಧನಾ ಪ್ರಾಜೆಕ್ಟ್’ಗೆ ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರಾಜೆಕ್ಟ್‍ನ ಅಂದಾಜು ವೆಚ್ಚವಾಗಿ 35 ಲಕ್ಷ ರೂ ಎಂದು ಹೇಳಲಾಗಿದೆ. ಈ ಪ್ರಶಸ್ತಿಯನ್ನು ಪ್ರೊ.ವಿಜಯಲಕ್ಷ್ಮಿ ದಯಾಳ್ ಅವರು ಕೈಗೊಳ್ಳುತ್ತಿರುವ “ಮ್ಯಾಗ್ನೆಟಿಕ್ ಮೆಟಿರಿಯಲ್ಸ್ & ಸೂಪರ್ ಕಂಡಕ್ಟಿವಿಟಿ” ಕ್ಷೇತ್ರದ ಸಂಶೋಧನಾ ಪರಿಶ್ರಮದ ಒಟ್ಟಾರೆ ಸಾಧನೆಗಾಗಿ ನೀಡಲಾಗಿದೆ.

ಪ್ರೊ. ವಿಜಯಲಕ್ಷ್ಮಿ ದಯಾಳ್ ಅವರು ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಜ್ಞಾನ ಪತ್ರಿಕೆಗಳಿಗೆ ಸಂಶೋಧನಾ ಬರಹಗಳನ್ನು ಒದಗಿಸಿದ್ದು, ವಿಜ್ಞಾನ ಸಮ್ಮೇಳನಗಳಲ್ಲಿ 70 ಹೆಚ್ಚು ಬಾರಿ ವಿಷಯ ಮಂಡನೆ ಮಾಡಿದ್ದಾರೆ. ಇದಲ್ಲದೆ ಅಂತಾರಾಷ್ಟ್ರೀಯ ಮಟ್ಟದ ಹಲವಾರು ಜರ್ನಲ್‍ಗಳಿಗೆ ತಜ್ಞರಾಗಿ ಸೇವೆ ಸಲ್ಲಿಸಿದ್ದು,  ಮತ್ತು ಹಲವಾರು ಭೌತಶಾಸ್ತ್ರ ಪುಸ್ತಕಗಳ ಪ್ರಕಾಶಕರಿಗೂ ರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಸಲಹೆ ನೀಡುತ್ತಿದ್ದಾರೆ.

ಈ ಮೊದಲು ಪ್ರೊ. ವಿಜಯಲಕ್ಷ್ಮಿ ಅವರು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದು, ಬಿಆರ್‍ಎನ್‍ಎಸ್‍ ಬಿಎಆರ್‍ಸಿ ಮುಂಬೈ ಅವರಿಂದ ಯಂಗ್‍ ಸೈಂಟಿಸ್ಟ್‍ ರಿಸರ್ಚ್ ಅವಾರ್ಡ್ ಪಡೆದಿದ್ದಾರಲ್ಲದೆ ಯುಜಿಸಿ-ಡಿಎಇ ಸಿಎಸ್‍ಆರ್‍ ಇಂದೋರ್ ಇವರ ಪ್ರಾಜೆಕ್ಟ್‍ಗಳಲ್ಲೂ ರಚನಾತ್ಮಕ ಪಾತ್ರ ವಹಿಸಿದ ಗೌರವಕ್ಕೆ ಪಾತ್ರರಾಗಿದ್ದಾರೆ.  ಭಾಗಿಯಾಗಿದ್ದಾರೆ.

ಬೆಳಗಾವಿಯ ವಿಶ್ವೇಶ್ವರಯ್ಯ ಟೆಕ್ನಿಕಲ್ ಯೂನಿವರ್ಸಿಟಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಮಾರ್ಗದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕಿರಿಯ ಸಂಶೋಧಕರನ್ನು ಅವಕಾಶಗಳಿದ್ದು, ಆಸಕ್ತರು [email protected] ಸಂಪರ್ಕಿಸಬಹುದು.

-ಎನ್.ಬಿ.

Leave a Reply

comments

Related Articles

error: