ಮೈಸೂರು

ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಶರಣು

ಸಾಲಬಾಧೆ ತಾಳಲಾರದೆ ಮೈಸೂರಿನ ಕೆ.ಆರ್. ನಗರ ತಾಲೂಕಿನ ಅಬ್ಬೂರು ಗ್ರಾಮದ ರೈತ ಪುಟ್ಟರಾಜು (58) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹನಸೋಗೆ ಸಹಕಾರ ಸಂಘ ಮತ್ತು ಕೈ ಸಾಲವಾಗಿ ಸುಮಾರು 7 ಲಕ್ಷದವರೆಗೆ ಸಾಲಮಾಡಿಕೊಂಡಿದ್ದರು ಎನ್ನಲಾಗಿದೆ. ಎರಡು ಎಕರೆ ಜಮೀನಿನಲ್ಲಿ ಭತ್ತ, ಶುಂಠಿ, ತಂಬಾಕು ಬೆಳೆದು ನಷ್ಟ ಅನುಭವಿಸಿದ್ದ ಹಿನ್ನೆಲೆಯಲ್ಲಿ ಶನಿವಾರ ಜಮೀನಿನ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಅವರನ್ನು ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಭಾನುವಾರ ಬೆಳಗಿನ ಜಾವ 4 ರ ಸುಮಾರಿನಲ್ಲಿ ಪುಟ್ಟರಾಜು ನಿಧನ ಹೊಂದಿದ್ದಾರೆ. ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: