ದೇಶಪ್ರಮುಖ ಸುದ್ದಿ

ಈ ಬಾರಿ ರಾಷ್ಟ್ರಪತಿ ಚುನಾವಣೆಯಲ್ಲಿ ಸಾರ್ವಕಾಲಿಕ ದಾಖಲೆಯ ಮತದಾನ

ನವದೆಹಲಿ, ಜುಲೈ 18 : ನಿನ್ನೆ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಈ ಬಾರಿ ಗರಿಷ್ಟ ಮತದಾನವಾಗಿದ ಎಂದು ತಿಳಿದು ಬಂದಿದೆ. ಭಾರತದ ರಾಷ್ಟ್ರಪತಿ ಹುದ್ದೆಗಾಗಿ ನಡೆದ ಇದುವರೆಗಿನ ಚುನಾವಣೆಗಳಲ್ಲೇ ಅತ್ಯಂತ ಹೆಚ್ಚಿನ ಶೇಕಡಾವಾರು ಮತದಾನ ನಿನ್ನೆ ನಡೆದಿದೆ.

ನಿನ್ನೆ ಶೇ. 99 ರಷ್ಟು ಜನಪ್ರತಿನಿಧಿಗಳು ಮತ ಚಲಾಯಿಸಿದ್ದು ಇದು ಇದುವರೆಗೆ ದಾಖಲಾದ ಗರಿಷ್ಠ ಮತದಾನ ಪ್ರಮಾಣವಾಗಿದೆ ಎಂದು ಲೋಕಸಭಾ ಪ್ರಧಾನ ಕಾರ್ಯದರ್ಶಿ ಅನೂಪ್ ಮಿಶ್ರಾ ತಿಳಿಸಿದ್ದಾರೆ. ಅರುಣಾಚಲ ಪ್ರದೇಶ, ಛತ್ತೀಸ್‍ಗಢ, ಅಸ್ಸಾಂ, ಗುಜರಾತ್, ಬಿಹಾರ್, ಹರ್ಯಾಣ, ಹಿಮಾಚಲ ಪ್ರದೇಶ್, ಜಾರ್ಖಂಡ್, ನಾಗಾಲ್ಯಾಂಡ್, ಉತ್ತರಾಖಂಡ್, ಪುದುಚೇರಿಗಳಲ್ಲಿ ಶೇ.100 ರಷ್ಟು ಮತದಾನವಾಗಿದೆ. ನಿನ್ನೆ ಸಂಸದ್‍ ಭವನದಲ್ಲಿ ಮತಚಲಾಯಿಸಬೇಕಿದ್ದ ಜನಪ್ರತಿನಿಧಗಳಲ್ಲಿಯೂ ಶೇಕಡಾ 99 ರಷ್ಟು ಮಂದಿ ಮತದಾನ ಮಾಡಿದ್ದ, ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಮತ ಚಲಾಯಿಸಿದರು.

ಕೋಲ್ಕತ್ತಾದಲ್ಲಿ ಮತಚಲಾಯಿಸಿದ ತೃಣಮೂಲ ಕಾಂಗ್ರೆಸ್ ಸಂಸದರು ಮೀರಾ ಕುಮಾರ್ ಅವರ ಪರವಾಗಿ ಮತಚಲಾವಣೆ ಮಾಡಿದ್ದು, ಇದು ಕೇಂದ್ರ ಸರ್ಕಾರದ ವಿರುದ್ಧ ನಮ್ಮ ಪ್ರತಿಭಟನೆಯಾಗಿದೆ ಎಂದು ಹೇಳಿದ್ದಾರೆ. ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರೂ ತಾವು ಮೀರಾ ಕುಮಾರ್ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದರು ಮತ್ತು ತಮ್ಮ ಪಕ್ಷದ ಶಾಸಕ ಸಂಸದರು ಯಾರಿಗೆ ಬೆಂಬಲ ನೀಡಬೇಕು ಎಂಬುದು ಪಕ್ಷದ ಸದಸ್ಯರ ವಿವೇಚನೆಗೆ ಬಿಟ್ಟಿದ್ದು ಎಂದರು. ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾ಼ದ್ ಅವರು ರಾಷ್ಟ್ರಪತಿ ಚುನಾವಣೆಯನ್ನು ಎರಡು ಸಿದ್ಧಾಂತಗಳ ನಡುವಿನ ಸ್ಪರ್ಧೆ ಎಂದು ವ್ಯಾಖ್ಯಾನಿಸಿದ್ದಾರೆ. ಜುಲೈ 20 ರಂದು ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ತಿಳಿಯಲಿದೆ.

-ಎನ್.ಬಿ.

Leave a Reply

comments

Related Articles

error: