ಸುದ್ದಿ ಸಂಕ್ಷಿಪ್ತ

ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಚಾಮರಾಜನಗರ, ಜು. 19:- ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನದ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗಿದೆ.

ಮೆಟ್ರಿಕ್ ಪೂರ್ವ ನವೀಕರಣ ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್ ಲೋಡ್ ಮಾಡುವ ದಿನಾಂಕವನ್ನು ಜುಲೈ 25ರವರೆಗೆ ವಿಸ್ತರಿಸಲಾಗಿದೆ. ಹೊಸ ವಿದ್ಯಾರ್ಥಿಗಳ ಅರ್ಜಿಗಳನ್ನು ಸ್ವೀಕರಿಸುವ ಅಂತಿಮ ದಿನಾಂಕವನ್ನು ಆಗಸ್ಟ್ 20ಕ್ಕೆ ವಿಸ್ತರಿಸಲಾಗಿದೆ. ನವೀಕರಣ ವಿದ್ಯಾರ್ಥಿಗಳು ಜಾತಿ ಆದಾಯ ಪ್ರಮಾಣ ಪತ್ರವನ್ನು ಮತ್ತೆ ನೀಡುವ ಅಗತ್ಯವಿರುವುದಿಲ್ಲ. ಆದರೆ 5 ವರ್ಷಗಳ ಅವಧಿ ಮೀರಿದಲ್ಲಿ ಮಾತ್ರ ಹೊಸದಾಗಿ ಪ್ರಮಾಣಪತ್ರವನ್ನು ನೀಡಬೇಕಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  ತಿಳಿಸಿದೆ. (ಆರ್.ವಿಎಸ್,ಎಸ್.ಎಚ್)

Leave a Reply

comments

Related Articles

error: