ದೇಶಪ್ರಮುಖ ಸುದ್ದಿ

ಜಯಲಲಿತಾ ಸಾವಿನ ಪ್ರಕರಣ ತನಿಖೆಗೆ ಸಿದ್ಧ: ಪ್ರತಾಪ್ ಸಿ.ರೆಡ್ಡಿ

ಚೆನ್ನೈ,ಜು.19-ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ಕುರಿತು ಯಾವುದೇ ತನಿಖೆಗೂ ನಾವು ಸಿದ್ಧರಿದ್ದೇವೆ ಎಂದು ಅಪೊಲೊ ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷ ಪ್ರತಾಪ್ ಸಿ.ರೆಡ್ಡಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜಯಲಲಿತಾ ಅವರಿಗೆ ನೀಡಲಾದ ಎಲ್ಲ ರೀತಿಯ ಚಿಕಿತ್ಸೆಗಳ ಬಗ್ಗೆ ಸೂಕ್ತ ದಾಖಲಾತಿಯನ್ನು ನಾವು ಹೊಂದಿದ್ದೇವೆ. ಅಲ್ಲದೆ, ಅವರಿಗೆ ನೀಡಲಾಗಿರುವ ಚಿಕಿತ್ಸೆಯಲ್ಲಿ ಯಾರ ಹಸ್ತಕ್ಷೇಪವೂ ಆಗಿಲ್ಲ. ಇದನ್ನು ದಾಖಲೆಗಳೇ ಹೇಳುತ್ತವೆ. ಹಿನ್ನೆಲೆಯಲ್ಲಿ, ನಾವು ಯಾವುದೇ ತನಿಖೆಗೆ ಸಿದ್ಧರಿದ್ದೇವೆ ಎಂದರು.

ಜಯಲಲಿತಾ ಅವರು ಡಿಸೆಂಬರ್ ವೇಳೆಗೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆ ಸಂಭವಿಸಿದ ಹೃದಯಾಘಾತದಿಂದ ಅವರು ಸಾವನ್ನಪ್ಪಿದರು ಎಂದು ಸ್ಪಷ್ಟಪಡಿಸಿದರು. (ವರದಿ-ಎಂ.ಎನ್)

Leave a Reply

comments

Related Articles

error: