ಮೈಸೂರು

ರಾಜರಾಜೇಶ್ವರಿ ಸೇವಾ ಟ್ರಸ್ಟ್ ನಿಂದ ಪ್ರೋತ್ಸಾಹ ಧನ ವಿತರಣೆ

ಮೈಸೂರು,ಜು.19 : ವಿದ್ಯಾರಣ್ಯಪುರಂನ ರಾಜರಾಜೇಶ್ವರಿ ಸೇವಾ ಟ್ರಸ್ಟ್ ನಿಂದ ನಗರದ ಶಂಕರಮಠದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹೆಚ್.ವಿ.ರಾಜೀವ್ ಮಾತನಾಡಿ ಟ್ರಸ್ಟ್ ವಿದ್ಯಾರ್ಥಿಗಳಿಗೆ ಉತ್ತಮ ಸೇವೆ ಮಾಡುತ್ತಿದೆ, ಅದರಲ್ಲೂ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಹಾಗೂ ಅನುಕೂಲ ನೀಡಬೇಕೆನ್ನುವುದು ಟ್ರಸ್ಟ್ ನ ಉದ್ದೇಶವೆಂದರು.

46 ವಿದ್ಯಾರ್ಥಿಗಳು  ಪ್ರೋತ್ಸಾಹ ಧನ ಪಡೆದರು.  ಮುಖ್ಯ ಅತಿಥಿಗಳಾಗಿ ನಾಗಲಕ್ಷ್ಮೀ ಹರಿಹರೇಶ್ವರ, ಟ್ರಸ್ಟಿಗಳಾದ ಪಿ.ನಂಜುಂಡಸ್ವಾಮಿ, ಬಿ.ಕೆ.ಸತೀಶ್, ಎಂ.ಎನ್.ಚಂದ್ರಶೇಖರನ್, ಎಸ್.ವಿ.ಕೃಷ್ಣಪ್ರಸಾದ್, ದಾನಿಗಳಾದ ಎನ್.ಜಿ.ವಾಸುದೇವ, ಎಂ.ಎನ್.ಚಂದ್ರಶೇಖರ್, ನವೀನ್ ಕುಮಾರ್, ಪ್ರದೀಪ್, ಕೆ.ಬಿ.ವೆಂಕಟೇಶ್, ಇತರರು ಹಾಜರಿದ್ದರು.(ಕೆ.ಎಂ.ಆರ್)

Leave a Reply

comments

Related Articles

error: