ಮೈಸೂರು

ಡಿ ಎಸ್ ಕೆ ಬೆನೆಲ್ಲಿಯ ನೂತನ ಮಳಿಗೆ ಆರಂಭ

ಮೈಸೂರು,ಜು.19:-ಡಿ ಎಸ್ ಕೆ  ಬೆನೆಲ್ಲಿಯ  ಪ್ರತ್ಯೇಕ ಮಳಿಗೆ ಇದೀಗ ಮೈಸೂರಿನಲ್ಲಿ ಆರಂಭವಾಗಿದ್ದು ಬುಧವಾರ ಉದ್ಘಾಟನೆಗೊಂಡಿತು.
ನಗರದ ಮೈಸೂರು-ಹುಣಸೂರು ರಸ್ತೆಯಲ್ಲಿರುವ ಹಿನಕಲ್ ನಲ್ಲಿರುವ ಸ್ಕೂಟರ್ ಶೋರೂಂನ್ನು ಶಾಸಕ ವಾಸು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಇದೇ ಸಂದರ್ಭ ಸ್ಕೂಟರ್ ಶೋರೂಂ ನ ಮಾಲೀಕ ನೀತಿನ್ ಸುದ್ದಿಗಾರರೊಂದಿಗೆ ಮಾತನಾಡಿ “ಶುಭಾ ಮೋಟರ್ಸ ಡೀಲರ್ ಶಿಪ್ ” ಅಡಿಯಲ್ಲಿ ಡಿ ಎಸ್ ಕೆ ಬೆನೆಲ್ಲಿ ಸೂಪರ್ ಬೈಕ್ ಕೈಗಾರಿಕೆಯಲ್ಲಿ ಭಾರತದಲ್ಲಿ ಅತ್ಯಂತ ದೃಢವಾದ ಸಂಸ್ಥೆಯಾಗಿದೆ.  ಡಿ ಎಸ್ ಕೆ  ಮೋಟರ್ ವೀಲ್ಸ್ ಈಗ ದಂತ ಕಥೆಯಾಗಿರುವ ಇಟಲಿಯ ಸೂಪರ್ ಬೈಕಿಂಗ್ ಮ್ಯಾಂಡ್ ಬೆನೆಲ್ಲಿಯ ಪ್ರತ್ಯೇಕ ಶೋ ರೂಂನ್ನು ಮೈಸೂರಿನಲ್ಲಿ ಆರಂಭಿಸಲಾಗಿದ್ದು ಶೋ ರೂಂನಲ್ಲಿ ಉತ್ತಮ ಬೈಕ್ ಗಳು ಲಭ್ಯವಿದೆ.  ಆರಂಭ ಬೆಲೆ 1,8ಲಕ್ಷದಿಂದ 3ಲಕ್ಷದವರೆಗೂ ಲಭ್ಯವಿದ್ದು, ಬೈಕ್ ಪ್ರಿಯರು ಹಾಗೂ ಗ್ರಾಹಕರು ಈ ಶೋ ರೂಂಗೆ  ಭೇಟಿ ನೀಡುವಂತೆ ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: