ಮೈಸೂರು

ಕಬಿನಿ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳ

ಮೈಸೂರು,ಜು.20:-ಕೇರಳದ ವೈನಾಡು ಪ್ರದೇಶದಲ್ಲೀ  ಭಾರಿ ಮಳೆ ಮುಂದುವರಿದಿದೆ. ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯದ ಒಳಹರಿವು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಕಬಿನಿ ಜಲಾಶಯದ ಇಂದಿನ ಒಳಹರಿವು 13,500 ಕ್ಯೂಸೆಕ್ ಗೆ ಏರಿಕೆಯಾಗಿದೆ. ಜಲಾಶಯದ ಹೊರ ಹರಿವು 1,000 ಕ್ಯೂಸೆಕ್ .ಜಲಾಶಯದ ಗರಿಷ್ಠ ಮಟ್ಟ  ಸಮುದ್ರ ಮಟ್ಟದಿಂದ 2284 ಅಡಿಗಳಷ್ಟಿದೆ. ಜಲಾಶಯದ ಇಂದಿನ ನೀರಿನ ಮಟ್ಟ 2269 ಅಡಿಗಳಷ್ಟಿದೆ. ಇದೇ ರೀತಿ ಮಳೆಯಾದರೆ 15 ದಿನಗಳಲ್ಲಿಯೇ ಡ್ಯಾಂ ತುಂಬುವ ನಿರೀಕ್ಷೆಯಿದೆ ಎನ್ನುತ್ತಾರೆ ಅಧಿಕಾರಿಗಳು. ಇದರ ಜೊತೆಗೆ, ಕಬಿನಿ ಜಲಾಶಯದ ಸುತ್ತ ಭಾರಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಕೃಷಿಕರು ಕೃಷಿ ಚಟುವಟಿಕೆ ಆರಂಭಿಸಿದ್ದು, ಸಂತಸದಲ್ಲಿದ್ದಾರೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: