ಮೈಸೂರು

ಬ್ರಹ್ಮಗಂಟು ಕೃತಿ ಲೋಕಾರ್ಪಣೆ

ಮೈಸೂರಿನ ಕೃಷ್ಣಮೂರ್ತಿಪುರಂ ನಮನ ಕಲಾ ಮಂಟಪದಲ್ಲಿ ಲೇಖಕಿ ಪುಟ್ಟಲಕ್ಷ್ಮಿ ಕಾಳೇಗೌಡ ದೊಡ್ಡಪಾಳ್ಯ ಅವರ ಬ್ರಹ್ಮಗಂಟು ಕೃತಿಯನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು.

ನಮನ ಕಲಾಮಂಟಪದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕಿ ಎಚ್.ಜೆ.ಸರಸ್ವತಿ ಬ್ರಹ್ಮಗಂಟು ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು ಪುಸ್ತಕ ರೂಪದಲ್ಲಿ ಸಾಧಕರ ಜೀವನ ಚರಿತ್ರೆಯನ್ನು ದಾಖಲಿಸಿದರೆ ಅದು ಸಮಾಜದ ಮುಂದಿನ ಪೀಳಿಗೆಗೆ ನೆರವಾಗಲಿದೆ ಎಂದರು.

ಲೇಖರು ತಮ್ಮ ಕೃತಿಯಲ್ಲಿ ಮಹಿಳಾ ವಿಜ್ಞಾನಿಗಳು, ಬುಡಕಟ್ಟು ಸಮುದಾಯದ ಸಾಧಕಿಯರ ಜೀವನ ಸಾರಾಂಶವನ್ನು ವಿವರಿಸಿದ್ದಾರೆ ಎಂದರು.

ವೇದಿಕೆಯಲ್ಲಿ ಸಾಹಿತಿಗಳಾದ ಮೀರಾಕುಮಾರ್, ಎಂ.ಎಸ್.ವಿಜಯಶಂಕರ್, ಕೃತಿಯ ಕರ್ತೃ ಪುಟ್ಟಲಕ್ಷ್ಮಿ ಕಾಳೇಗೌಡ ದೊಡ್ಡಪಾಳ್ಯ ಉಪಸ್ಥಿತರಿದ್ದರು.

Leave a Reply

comments

Related Articles

error: