ಕರ್ನಾಟಕ

ಶಂಕಿತ ಡೆಂಗ್ಯೂಗೆ ಮಹಿಳೆ ಬಲಿ

ರಾಜ್ಯ(ಮಂಡ್ಯ)ಜು.20:-ಶಂಕಿತ ಡೆಂಗ್ಯೂಗೆ ಮಂಡ್ಯದಲ್ಲಿ ಮತ್ತೋರ್ವ ಮಹಿಳೆ  ಬಲಿಯಾಗಿದ್ದಾರೆ.

ಮೃತಳನ್ನು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ನೆಲ್ಲೂರು ಸರೋಜಮ್ಮ(36)  ಎಂದು ಗುರುತಿಸಲಾಗಿದೆ. ಮಹಿಳೆ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಮೈಸೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: