ಪ್ರಮುಖ ಸುದ್ದಿಮೈಸೂರು

ಮಳೆಗಾಲ ಆರಂಭವಾದರೂ ಕುಡಿಯುವ ನೀರಿಗೆ ನಿಲ್ಲದ ಬವಣೆ

ಮೈಸೂರು,ಜು.20:- ಮೈಸೂರಿನಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಕುಡಿಯುವ ನೀರಿನ ಬವಣೆ ಇನ್ನೂ ತಪ್ಪಿಲ್ಲ.

ಮೈಸೂರಿನ ಹೆಬ್ಬಾಳು ಬಡಾವಣೆಯಲ್ಲಿನ ಜನತೆಗೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಇಲ್ಲಿನ ಶುಭೋಧಿನಿ ಕಲ್ಯಾಣ ಮಂಟಪದ ಎದುರು ಇರುವ ವಾಟರ್ ವಾಲ್ ನಲ್ಲಿ ಸೋರುತ್ತಿರುವ ನೀರನ್ನು ಮಹಿಳೆಯೋರ್ವರು ಬಿಂದಿಗೆಯಲ್ಲಿ ಹಿಡಿದು ಕೊಂಡೊಯ್ಯುವ ಮನಕಲಕುವ ದೃಶ್ಯ ರಸ್ತೆಯ ಪಕ್ಕದಲ್ಲಿ ಕಂಡು ಬರುತ್ತಿದೆ. ಮಳೆಗಾಲ ಆರಂಭವಾದರೂ ನೀರಿನ ಬವಣೆ ತಪ್ಪುತ್ತಿಲ್ಲ. ಸಮರ್ಪಕ ನೀರು ಪೂರೈಕೆಯ ಹೊಣೆ ಯಾರದು? ಈ ಪ್ರಶ್ನೆಗೆ ಸಂಬಂಧಪಟ್ಟವರು ಉತ್ತರ ನೀಡಬೇಕಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: