ಕರ್ನಾಟಕಮೈಸೂರು

ಕಾಲು ಜಾರಿ ಬಿದ್ದು ಎಸ್ ಐ ಸಾವು

ಮೈಸೂರಿನಿಂದ ಬೆಂಗಳೂರು ಕಡೆಗೆ ಹೊರಟಿದ್ದ ತಿರುಪತಿ ಎಕ್ಸಪ್ರೆಸ್ ರೈಲಿನಿಂದ ಇಳಿಯುವಾಗ ಹಳಿಗೆ ಜಾರಿ ಬಿದ್ದು ರೈಲ್ವೆ ರಕ್ಷಣಾ ದಳದ ಸಬ್ ಇನ್ಸ್ ಪೆಕ್ಟರೋರ್ವರು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.

ಮೃತ ರಕ್ಷಣಾ ದಳದ ಸಬ್ ಇನ್ಸ್ ಪೆಕ್ಟರ್ ನ್ನು ಜ್ಯೋತಿಪ್ರಭು ಎಂದು ಹೇಳಲಾಗಿದೆ. ರೈಲಿನ ಎಸ್.ಎರಡು ಬೋಗಿಯಲ್ಲಿ ಪ್ರಯಾಣಿಕರ ನಡುವೆ ವಾಗ್ವಾದ ನಡೆಯುತ್ತಿದೆ ಎಂಬುದನ್ನರಿತು ಮಂಡ್ಯ ರೈಲು ನಿಲ್ದಾಣಕ್ಕೆ ರೈಲು ಬಂದು ನಿಲ್ಲುತ್ತಿದ್ದಂತೆಯೇ ಸಿಬ್ಬಂದಿಯೊಂದಿಗೆ ತೆರಳಿ ಸಮಸ್ಯೆ ಪರಿಹರಿಸಿದ್ದರು. ಬಳಿಕ ರೈಲು ಚಲಿಸಲಾರಂಭಿಸಿದ್ದು ಉಳಿದ ಸಿಬ್ಬಂದಿಗಳು ಇಳಿದುಕೊಂಡಿದ್ದರು. ಆದರೆ ಇವರು ಇಳಿಯುವ ವೇಳೆ ಕಾಲು ಜಾರಿ ರೈಲು ಚಕ್ರಕ್ಕೆ ಸಿಲುಕಿದ್ದರು ಎನ್ನಲಾಗಿದೆ. ಗಂಭೀರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿರುವ ವೇಳೆಯೇ ಮಾರ್ಗ ಮಧ್ಯ ಕೊನೆಯುಸಿರೆಳೆದಿದ್ದಾರೆ.

ಮಂಡ್ಯ ರೈಲ್ವೆ ಹೊರ ಉಪಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: