ದೇಶಪ್ರಮುಖ ಸುದ್ದಿ

ತಮಿಳುನಾಡಿನವರಿಗೆ ನೀಟ್ ಪ್ರಶ್ನೆಪತ್ರಿಕೆ ಕಠಿಣ : ಎಐಎಡಿಎಂಕೆ ಸಂಸದನ ಅಳಲು

ನವದೆಹಲಿ, ಜುಲೈ 20 : ವೈದ್ಯಕೀಯ ಕೋರ್ಸ್‍ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(NEET)ಯಲ್ಲಿ ಉತ್ತರ ಭಾರತದ ವಿದ್ಯಾರ್ಥಿಗಳಿಗೆ ಸುಲಭವಾದ ಪ್ರಶ್ನೆಗಳು ಸಿಕ್ಕಿದ್ದವು. ತಮಿಳುನಾಡಿನ ವಿದ್ಯಾರ್ಥಿಗಳಿಗೆ ಕಷ್ಟಕರವಾದ ಪ್ರಶ್ನೆಗಳನ್ನು ಕೇಳಲಾಗಿತ್ತು ಎಂದು ಎಐಎಡಿಎಂಕೆ ಸಂಸದ ಎ.ನವನೀತ ಕೃಷ್ಣನ್ ಅವರು ರಾಜ್ಯಸಭೆಯಲ್ಲಿ ಆರೋಪಿಸಿದ್ದಾರೆ.

ನವನೀತ ಕೃಷ್ಣನ್ ಅವರ ಪ್ರಕಾರ, “ನೀಟ್ ಪರೀಕ್ಷೆಯಲ್ಲಿ ತಮಿಳುನಾಡಿನ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸದಿರಲು ಸಾಧ್ಯವಾಗದೇ ಇರುವುದಕ್ಕೆ ಕಾರಣ ಎರಡು ರೀತಿಯ ಪ್ರಶ್ನೆಪತ್ರಿಕೆಗಳು. ಸುಲಭವಾದ ಪ್ರಶ್ನೆಪತ್ರಿಕೆ ಉತ್ತರ ಭಾರತದಲ್ಲಿ ವಿತರಣೆಯಾಗಿದ್ದವು. ಕಷ್ಟವಾದ ಪ್ರಶ್ನೆಪತ್ರಿಕೆ ತಮಿಳುನಾಡಿನ ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ಇದರಿಂದಾಗಿ ತಮಿಳುನಾಡಿನ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ಪಡೆಯುವುದು ಸಾಧ್ಯವಾಗಲಿಲ್ಲ. ಹೀಗಾಗಿ ನೀಟ್‍`ನಿಂದ ರಾಜ್ಯದ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಬೇಕು” ಎಂಬುದು ಅವರ ವಾದವಾಗಿದ್ದು. ಇವರ ಮಾತುಗಳಿಗೆ ಡಿಎಂಕೆ ಪಕ್ಷದ ಸಂಸದೆ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿಯವರ ಪುತ್ರಿ ಕನಿಮೊಳಿ ಅವರೂ ಬೆಂಬಲ ವ್ಯಕ್ತಪಡಿಸಿದರು.

-ಎನ್.ಬಿ.

Leave a Reply

comments

Related Articles

error: