ಮೈಸೂರು

ಪೊಲೀಸರ ಸಮಸ್ಯೆ ಆಲಿಸಿದ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್

ಪೊಲೀಸರು ದಿನದ ಇಪ್ಪತ್ತನಾಲ್ಕು ಗಂಟೆ ಸಾರ್ವಜನಿಕ ಸೇವೆಗೆ ತಮ್ಮ ಜೀವನವನ್ನು ಮೀಸಲಿಡುತ್ತಾರೆ. ಅವರ ಖಾಸಗೀ ಜೀವನಕ್ಕೂ ಅಷ್ಟೊಂದು ಮಹತ್ವ ನೀಡದ ಪೊಲೀಸರು ಸಾರ್ವಜನಿಕರ ಸೇವೆಗೆ ತಮ್ಮ ಜೀವನವನ್ನು ಶ್ರೀಗಂಧದಂತೆ ತೇಯುತ್ತಾರೆ. ಅವರಿಗೂ ಅವರದೇ ಆದ ಸಮಸ್ಯೆಗಳಿರುತ್ತವೆ ಎನ್ನುವುದನ್ನು ಕೆಲವರು ಅರಿತಿರುವುದಿಲ್ಲ. ಆದರೆ ಇದೇ ಪ್ರಥಮ ಬಾರಿಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ಪೊಲೀಸರ ಸಮಸ್ಯೆಗಳನ್ನು ಆಲಿಸಿದ್ದಾರೆ.

ಮೈಸೂರಿನ ಡಿ.ಆರ್.ಪೆರೇಡ್ ಮೈದಾನದಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ಪ್ರತಿಯೊಂದು ಪೊಲೀಸರಿಂದಲೂ ಸಮಸ್ಯೆಗಳನ್ನು ಆಲಿಸಿದರು. ಪೊಲೀಸ್ ಸಿಬ್ಬಂದಿಗಳು ರವಿ.ಡಿ.ಚನ್ನಣ್ಣನವರ್ ಬಳಿ ತಮ್ಮ ನೋವು, ತಮಗಾಗುತ್ತಿರುವ ತೊಂದರೆಗಳನ್ನು ತೋಡಿಕೊಂಡರು.

ಈ ಕುರಿತು ಸಿಟಿಟುಡೆ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ಅವರನ್ನು ಮಾತನಾಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸರು ಸಾರ್ವಜನಿಕ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಡುತ್ತಾರೆ. ಅವರು ಎಲ್ಲರಲ್ಲಿಯೂ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ. ಅವರಿಗೆ ಅವರ ಆರೋಗ್ಯವನ್ನು ನೋಡಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಅಷ್ಟರಮಟ್ಟಿಗೆ ಅವರು ತಮ್ಮನ್ನು ಸೇವೆಗೆ ಸಮರ್ಪಿಸಿಕೊಳ್ಳುತ್ತಾರೆ. ಅದಕ್ಕಾಗಿ ಅವರ ಸಮಸ್ಯೆ ಅರಿಯಲು ಅವರ ಜೊತೆ ಮಾತನಾಡಿದೆ. ನಮಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ವಸತಿಗೃಹಗಳು ವಾಸಿಸಲು ಯೋಗ್ಯವಾಗಿಲ್ಲ. ಕೆಲವು ಕಡೆ ಹಾಳಾಗಿದೆ. ನಮಗೂ ನಮ್ಮ ಆರೋಗ್ಯ ನೋಡಿಕೊಳ್ಳಲು ವಿಶ್ರಾಂತಿಯ ಅವಶ್ಯಕತೆ ಇದೆ. ನಮಗೆ ನೀಡೋ ವೇತನ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ. ವೇತನ ಏರಿಕೆಯಾದರೆ ಒಳ್ಳೆಯದಿತ್ತು ಎಂದಿದ್ದಾರೆ. ಈ ಕುರಿತು ಎಲ್ಲ ಮಾಹಿತಿಯನ್ನು, ಅವರ ಸಮಸ್ಯೆಯನ್ನು ಕಲೆ ಹಾಕಿದ್ದೇನೆ. ಅದನ್ನು ಉನ್ನತಾಧಿಕಾರಿಗಳಿಗೆ ತಿಳಿಸಿ ನನ್ನ ಕೈಲಾದ ಮಟ್ಟಿಗೆ ಅವರ ಸಮಸ್ಯೆ ಪರಿಹರಿಸಲು ಯತ್ನಿಸುತ್ತೇನೆ ಎಂದರು.

ಈ ಸಂದರ್ಭ ಹೆಚ್ಚುವರಿ ಡಿವೈಎಸ್ಪಿ ವಿಕ್ರಮ್ ಮಟ್ಟಿ ಜೊತೆಗಿದ್ದರು.

Leave a Reply

comments

Related Articles

error: