ಮೈಸೂರು

ಜೆ.ಎಸ್.ಎಸ್. ಆಸ್ಪತ್ರೆ ವೈದ್ಯರ ನಿಸ್ವಾರ್ಥ ಸೇವೆ: ಕೃತಜ್ಞತೆ ಸಲ್ಲಿಸಿದ ಶಿವಕುಮಾರ್

ಕೊಳ್ಳೆಗಾಲ ತಾಲ್ಲೂಕಿನ ಮಾರ್ಟಳ್ಳಿ ಗ್ರಾಮದ ದಿನಗೂಲಿ ಕಾರ್ಮಿಕ ಶಿವಕುಮಾರ್ ಮತ್ತು ಭವ್ಯ ದಂಪತಿಗಳಿಗೆ ಎರಡು ಮಕ್ಕಳಿದ್ದು ಮಗಳಿಗೆ ತಲೆಸೀಮಿಯಾ ಕಾಯಿಲೆ. ಪ್ರತಿ ಹದಿನೈದು ದಿನಕ್ಕೊಮ್ಮೆ ಚಿಕಿತ್ಸೆ ನೀಡಬೇಕು. ಎರಡು ವರ್ಷದ ಮಗ ಶರಣ್ ರಾಥೋಡ್ ಗೆ ಡೆಂಗ್ಯೂ ಜ್ವರ, ನಿಮೋನಿಯ, ಅಪೌಷ್ಠಿಕತೆ, ಶ್ವಾಸಕೋಶದ ಸೋಂಕು ಹೀಗೆ ಹಲವಾರು ಕಾಯಿಲೆಯಿಂದ ಬಳಲುತ್ತಿದ್ದು ಆರ್ಥಿಕವಾಗಿ ಹಿಂದುಳಿದ ಇವರಿಗೆ ನಗರದ ಜೆ.ಎಸ್.ಎಸ್. ಆಸ್ಪತ್ರೆಯ ಮಕ್ಕಳ ವಿಭಾಗದ ವೈದ್ಯರು ಹಾಗೂ ನಿರ್ದೇಶಕ ಡಾ.ಎಂ.ಡಿ. ರವಿಯವರ ಮಾರ್ಗದರ್ಶನದ ಮೇರೆಗೆ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ಮಕ್ಕಳ ತುರ್ತ ನಿಗಾ ಘಟಕದಲ್ಲಿ ಸುಮಾರು ಹದಿನೈದು ದಿನಗಳ ಕಾಲ ಕೃತ ಉಸಿರಾಟದ ಮೂಲಕ ಚಿಕಿತ್ಸೆ ನೀಡಿ. ವೈದ್ಯರುಗಳು ರೋಗಿಯ ಪೋಷಕರಿಗೆ ಧನ ಸಹಾಯ ಹಾಗೂ ಉಚಿತ ಔಷಧಿ ನೀಡಿ ಮಾನವೀಯತೆ ಮೆರೆದರು.

ಜೆ.ಎಸ್.ಎಸ್. ಆಸ್ಪತ್ರೆಯ ಸಿಬ್ಬಂದಿಗಳಿಗೆ ಹಾಗೂ ಸಮಾಜ ಸೇವಕರಿಗೆ ಧನಸಹಾಯ ಮಾಡಲು ಮನವಿ ಮಾಡಿ ಬಂದ ಹಣವನ್ನು ಚಿಕಿತ್ಸೆ ವೆಚ್ಚಕ್ಕೆ ಬಳಸಿದರು. ಜೆ.ಎಸ್.ಎಸ್. ಆಸ್ಪತ್ರೆಯು ಮಾನವೀಯ ಮೌಲ್ಯಗಳ ನೆಲಗಟ್ಟಿನಲ್ಲಿ ತುರ್ತು ಚಿಕಿತ್ಸೆ ನೀಡಿ ಮಗನ ಜೀವ ಕಾಪಾಡಿದ ವೈದ್ಯರುಗಳಿಗೆ ಹಾಗೂ ಸಕಾಲದಲ್ಲಿ ಧನ ಸಹಾಯ ಮಾಡಿದ ದಾನಿಗಳಿಗೆ ರೋಗಿಯ ತಂದೆ ಶಿವಕುಮಾರ್ ಕೃತಜ್ಞತೆ ತಿಳಿಸಿದ್ದಾರೆ.

Leave a Reply

comments

Related Articles

error: