ಮೈಸೂರು

ಕೇಂದ್ರ ಸರ್ಕಾರ ಹಿಂದುಳಿದವರ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ : ರಾಮು ಐಲಾಪುರ

ಮೈಸೂರು,ಜು.20:- ಕೇಂದ್ರದಲ್ಲಿ ಆಡಳಿತದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದಲಿತರ, ಶೋಷಿತರ, ಅಲ್ಪಸಂಖ್ಯಾತರ, ಹಿಂದುಳಿದವರ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಾ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರಿದೆ ಎಂದು ತಾಲೂಕು ಸ್ಥಾಯಿ ಸಮಿತಿ ಅಧ್ಯಕ್ಷ ರಾಮು ಐಲಾಪುರ ಆರೋಪಿಸಿದರು.
ಅವರುಪಿರಿಯಾಪಟ್ಟಣದ ಆಡಳಿತ ಭವನದ ಆವರಣದಲ್ಲಿ ದಲಿತ ಮತ್ತು ದಲಿತಪರ ಸಂಘಗಳ ಒಕ್ಕೂಟಗಳ ವತಿಯಿಂದ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ಧೋರಣೆಯ ವಿರುದ್ಧ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು. ಕೇಂದ್ರ ಸರ್ಕಾರ ನಿರಂತರವಾಗಿ ದಲಿತರ, ಶೋಷಿತರ, ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯ, ಹಲ್ಲೆ ನಡೆಸುತ್ತಿದ್ದು ಇದನ್ನು ದೇಶದ ಮುಂದೆ ಬಿಚ್ಚಿಡಲು ದಲಿತ ಸಂಸದೆ ಮಾಯಾವತಿ ಸಂಸತ್ತಿನಲ್ಲಿ ಮಾತನಾಡಲು ಬಯಸಿದಾಗ ಸಭಾಪತಿಗಳು ನಿರಾಕರಣೆ ಮಾಡಿರುವುದು ಇಡೀ ದೇಶಕ್ಕೆ ಮಾಡಿದ ಅಪಮಾನವಾಗಿದೆ ಎಂದರು. ಆಹಾರದ ಹಕ್ಕನ್ನು ಕಸಿಯಲು ಹೊರಟಿರುವ ಕೇಂದ್ರ ಸರ್ಕಾರ ಗೋ ರಕ್ಷಣೆ ಹೆಸರಿನಲ್ಲಿ ಅಮಾಯಕರಿಗೆ ಕಿರುಕುಳ ನೀಡುತ್ತಿದೆ. ಮನುವಾದಿಗಳನ್ನು ಕೂಡಲೇ ಬಂಧಿಸಬೇಕು ಡಾ.ಬಾಬಾಸಾಬ್ ಅಂಬೇಡ್ಕರ್  ಜಾರಿಗೆ ತಂದಿದ್ದ ಮೀಸಲಾತಿಯನ್ನು ರದ್ದು ಮಾಡಲು ಹೊರಟಿರುವ ಬಿಜೆಪಿ ಸರ್ಕಾರ ಸಂವಿಧಾನವನ್ನೇ ತಿರುಚಲು ಹೊರಟಿದೆ ಎಂದು ಆರೋಪಿಸಿದರು.
ಈ ಸಂದರ್ಭ ದಲಿತ ಮುಖಂಡರಾದ ಸಿ.ತಮ್ಮಣ್ಣಯ್ಯ, ಶಿವರಾಜ್, ದೇವರಾಜು, ಪುಟ್ಟಮಾದಯ್ಯ, ದೇವೆಂದ್ರಕುಮಾರ್, ಈರಾಜ್ ಬಹುಜನ್, ವಸಂತ, ಮಂಜು, ಚನ್ನಪ್ಪ, ರಮೇಶ್, ಆರ್.ಡಿ.ಮಹದೇವ್, ಕಾಂತರಾಜು.ಎಂ.ಕೆ, ನಲ್ಲೂರಯ್ಯ, ಸಿ.ಕೆ.ರಾಜು, ಪ್ರಕಾಶ್, ಸೋಮು ಸೇರಿದಂತೆ ಮತ್ತಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: