ಮೈಸೂರು

ವಸತಿ ಫಲಾನುಭವಿಗಳಿಗೆ ಇತರೆ ಬ್ಯಾಂಕ್ ಗಳಲ್ಲೂ ಹಣ ಜಮಾ ಮಾಡಲು ಒತ್ತಾಯ

ಮೈಸೂರು,ಜು.20:- ಟಿ.ನರಸೀಪುರ  ವಸತಿ ಫಲಾನುಭವಿಗಳಿಗೆ ಒಂದೇ ಬ್ಯಾಂಕ್ ನಲ್ಲಿ  ಹಣ ಹಾಕಲಾಗುತ್ತಿದ್ದು, ಫಲಾನುಭವಿಗಳು ತೊಂದರೆ ಅನುಭವಿಸುವಂತಾಗಿದೆ. ಇತರೆ ಬ್ಯಾಂಕ್ ಗಳಿಗೆ ಫಲಾನುಭವಿಯ ಹಣ ಜಮಾ ಮಾಡಲು ಮುಂದಾಗದಿದ್ದರೆ ಉಗ್ರವಾದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನಲ್ಲಿ ಒಟ್ಟು 36 ಗ್ರಾಮ ಪಂಚಾಯಿತಿಗಳಿದ್ದು, ಪ್ರತಿ ಬಾರಿಯು ಸರ್ಕಾರದಿಂದ ಮಂಜೂರಾಗುವ ಸುಮಾರು 2000 ಕ್ಕೂ ಅಧಿಕ ವಸತಿ ಫಲಾನುಭವಿಗಳನ್ನು ಗ್ರಾ.ಪಂ.ಗಳ ಅಧ್ಯಕ್ಷರು ಮತ್ತು ಸ್ಥಳಿಯ ಜನಪ್ರತಿನಿಧಿಗಳು ವಾರ್ಡ್ ಮತ್ತು ಗ್ರಾಮ ಸಭೆಯ ಮೂಲಕ ಆಯ್ಕೆ ಮಾಡುತ್ತಾರೆ. ಆದರೆ ವಸತಿ ನಿರ್ಮಾಣ ಮಾಡಿದ ಫಲಾನುಭವಿಗಳು ನಾಲ್ಕು ಕಂತಿನಲ್ಲಿ ಸರ್ಕಾರದಿಂದ ಮಂಜೂರಾದ ಹಣವನ್ನು ಪಡೆದುಕೊಳ್ಳಬೇಕು ಎಂದು ರಾಜೀವ್ ಗಾಂಧಿ ವಸತಿ ನಿಗಮದ ನಿಯಮವಾಗಿದೆ. ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ತಾಲೂಕಿನ 36 ಗ್ರಾಮ ಪಂಚಾಯಿತಿಗಳಿಂದ ಆಯ್ಕೆಯಾಗುವ 2000 ಕ್ಕೂ ಅಧಿಕ ಫಲಾನುಭವಿಗಳ ಹಣವನ್ನು ತಾಲೋಕಿನ ಕಾವೇರಿ ಗ್ರಾಮೀಣ ಬ್ಯಾಂಕ್ ಒಂದಕ್ಕೆ ಮಾತ್ರ ಜಮಾ ಮಾಡಲಾಗುತ್ತದೆ. ಇನ್ನು ತಾಲೂಕಿನಲ್ಲಿರುವ ಇತರೆ ಬ್ಯಾಂಕುಗಳಿಗೆ ಹಣ ಹಾಕುತ್ತಿಲ್ಲ ಇದರಿಂದ ಸಾರ್ವಜನಿಕ ಫಲಾನುಭವಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ರಾಜೀವ್ ಗಾಂಧಿ ನಿಗಮ ಮಂಡಳಿಯಿಂದ ನೇರವಾಗಿ ಫಲಾನುಭವಿಗಳ ಹಣವನ್ನು  ಇತರೆ ಬ್ಯಾಂಕುಗಳಿಗೂ ಹಾಕಬೇಕು ಪ್ರತಿ ಬಿಲ್ ಪಡೆಯಲು ಕಾವೇರಿ ಬ್ಯಾಂಕ್ ಮುಂದೆ ಊಟ,ದಿನಿತ್ಯದ ಕೆಲಸವನ್ನು ಬಿಟ್ಟು ಬಿಲ್ ಹಣಕ್ಕಾಗಿ 2-3 ದಿನ ಕಾಯಬೇಕು. ವಸತಿ ಫಲಾನುಭವಿಗಳು ಅನುಭವಿಸುತ್ತಿರುವ ಸಮಸ್ಯೆಯನ್ನು ತಪ್ಪಿಸಬೇಕು ಎಂದು ನೊಂದ ವಸತಿ ಫಲಾನುಭವಿಗಳು ಆಗ್ರಹಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: