ಮೈಸೂರು

ಏಕವ್ಯಕ್ತಿ ನೃತ್ಯರೂಪಕ ಪ್ರದರ್ಶನ

ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ಕಲಾಭಿವರ್ಧನ ಕಾರ್ಯಕ್ರಮದಲ್ಲಿ ಕಲಾ ಸಂದೇಶ ಪ್ರತಿಷ್ಠಾನದ ಸಂಸ್ಥಾಪಕ ಹಾಗೂ ಮಾರ್ಗದರ್ಶಿ ವಿದ್ವಾನ್ ಕೆ.ಸಂದೇಶ್ ಭಾರ್ಗವ್ ಏಕವ್ಯಕ್ತಿ ನೃತ್ಯರೂಪಕ ನಮಾಮಿ ಭಗವತ್ಪಾದಂನ್ನು ಪ್ರಸ್ತುತಗೊಳಿಸಿದರು.

ನೃತ್ಯರೂಪಕದಲ್ಲಿ ಚಿಂತನೆಯನ್ನು ಭಿತ್ತಿ, ಭವ್ಯ ಭವಿತವ್ಯಕ್ಕೆ ಕೈ ಜೋಡಿಸಬೇಕೆನ್ನುವ ಅಭಿಲಾಷೆಯನ್ನು  ಹೊಂದಿದ್ದು ಅದರ ಫಲವಾಗಿ  ನೃತ್ಯ ಮೂಡಿಬಂದಿತ್ತು. ಆಚಾರ್ಯ ಶಂಕರರ ತತ್ವವನ್ನು, ಅವರ ಜೀವನ ಕಥನವನ್ನು ನೃತ್ಯಾಭಿನಯದಲ್ಲಿ ಸಹೃದಯರ ಮುಂದಿಡುವಲ್ಲಿ ಯಶಸ್ವಿಯಾದರು.

ವಿದುಷಿ ಡಾ.ವಸುಂಧರಾ ದೊರೆಸ್ವಾಮಿ ನೃತ್ಯ ಸಂಯೋಜನೆ ಮಾಡಿದ್ದು, ಹರ್ಷ ಹಾಡುಗಾರಿಕೆಯಲ್ಲಿ, ಹನುಮಂತರಾಜು ಮೃದಂಗದಲ್ಲಿ, ಹೆಚ್.ಎಸ್.ತಾಂಡವಮೂರ್ತಿ ಪಿಟೀಲಿನಲ್ಲಿ, ನಿತೇಶ್ ಅಮ್ಮಣ್ಣಾಯ ಕೊಳಲಿನಲ್ಲಿ ವಿನಯ್ ಕುಮಾರ್ ರಿದಂಪ್ಯಾಡ್ ನಲ್ಲಿ ಸಾಥ್ ನೀಡಿದರು.

Leave a Reply

comments

Related Articles

error: