
ಕರ್ನಾಟಕ
ಬದುಕಿದ್ದವರನ್ನು ಸಾಯಿಸಿದ್ದು ಶೋಭಾ ಮನಸ್ಥಿತಿಯನ್ನು ತೋರಿಸುತ್ತದೆ: ಜಿ.ಪರಮೇಶ್ವರ್
ಬೆಂಗಳೂರು,ಜು.20-ಬದುಕಿದ್ದವರನ್ನು ಸಾಯಿಸಿ ಕೇಂದ್ರಕ್ಕೆ ಪತ್ರ ಬರೆದಿರುವುದು ಶೋಭಾ ಕರಂದ್ಲಾಜೆ ಅವರ ಮನಸ್ಥಿತಿ ಯಾವ ರೀತಿ ಇದೆ ಎಂಬುದನ್ನು ತೋರಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಒಬ್ಬ ಸಂಸದೆಯಾಗಿ ಕೇಂದ್ರಕ್ಕೆ ಪತ್ರ ಬರೆಯಲಿ. ಆದರೆ ಬದುಕಿದ್ದವರನ್ನು ಸಾಯಿಸ್ತಾರೆ ಅಂದ್ರೆ ಇವರಿಗೆ ಏನು ಹೇಳಬೇಕು. ಎಲ್ಲ ವಿಚಾರದಲ್ಲೂ ಬರೀ ರಾಜಕಾರಣ ನೋಡುವುದು ಸರಿಯಲ್ಲ ಎಂದರು.
ರಾಜ್ಯಕ್ಕೆ ಪ್ರತ್ಯೇಕ ಧ್ವಜ ವಿನ್ಯಾಸದ ವಿಚಾರ ಬಿಜೆಪಿ ಕಾಲದಲ್ಲೇ ಚರ್ಚೆಗೆ ಬಂದಿತ್ತು. ಅಂದಿನ ಸಚಿವ ಗೋವಿಂದ ಕಾರಜೋಳ ಮುಂದೆ ಇಂತಹ ಪ್ರಸ್ತಾಪ ಇತ್ತು. ಆದರೆ, ಬಿಜೆಪಿಯವರು ಅದನ್ನು ಅಂದು ಕೈಬಿಟ್ಟಿದ್ದರು. ನಾವೀಗ ಸಮಿತಿ ರಚನೆಯಷ್ಟೇ ಮಾಡಿದ್ದೇವೆ ಅಷ್ಟೇ ಎಂದರು.
ನಿರ್ದಿಷ್ಟ ದಾಖಲೆ ಇದ್ದರೆ ಆರೋಪ ಮಾಡಿ ದೂರು ಕೊಡಲಿ. ಸುಮ್ಮನೆ ಆರೋಪ ಮಾಡುವುದು ಬೇಡ. ಇಂದಿರಾಗಾಂಧಿ ಹೆಸರಲ್ಲಿ ದುಡ್ಡು ಹೊಡೆಯಕ್ಕೆ ಮುಂದಾಗಿದ್ದಾರೆ ಅನ್ನುವ ರಮೇಶ್ ಅವರ ಬೇಜವಾಬ್ದಾರಿ ಹೇಳಿಕೆ ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದರು.
ಅಗಸ್ಟ್ ೪ ರಂದು ರಾಯಚೂರಲ್ಲಿ ಕಾಂಗ್ರೆಸ್ ಸಮಾವೇಶ ನಡೆಯಲಿದ್ದು, ಈ ಸಮಾವೇಶದಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಸಮಾವೇಶದ ರೂಪರೇಶ ಕುರಿತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ನೇತೃತ್ವದಲ್ಲಿ ಗುಲ್ಬರ್ಗ ಕಾಂಗ್ರೆಸ್ ಮುಖಂಡರ ಸಭೆ ನಡೆಯಲಿದೆ ಎಂದು ತಿಳಿಸಿದರು. (ವರದಿ-ಎಸ್.ಎನ್, ಎಂ.ಎನ್)