ಲೈಫ್ & ಸ್ಟೈಲ್

ಚಳಿಗಾಲದಲ್ಲಿ ತ್ವಚೆ ಹಾಗೂ ಕೂದಲಿನ ರಕ್ಷಣೆಗೆ ಸರಳ ಸೂತ್ರಗಳು

new-foorತ್ವಚೆ ರಕ್ಷಣೆಯು ಚಳಿಗಾಲದಲ್ಲಿ ಅತಿ ದುಸ್ತರ. ಬೀಸುವ ತಣ್ಣನೆಯ ಗಾಳಿಗೆ ತ್ವಚೆಯು ಬಿಮ್ಮನೇ ಬಿರುದು ರಕ್ತ ಸೋರುವ ಹಂತ ತಲುಪಿದರೂ ಅತಿಶಯೋಕ್ತಿಯಿಲ್ಲ. ಚುಮುಚುಮು ಚಳಿಗೆ ಬಿಸಿಲಿಗೆ ಮೈಯೊಡ್ಡಿದ್ದರೆ ಅದೇನೋ ಹಿತ, ಖುಷಿ ಎರಡು ಒಮ್ಮೆ ಸಮೀಲಿತವಾಗುವುದು. ಆದರೆ, ಬಿರು ಬಿಸಿಲಿನಿಂದ ಚರ್ಮದ ಸೌಂರ್ದಯವು ಹಾನಿಗೀಡಾಗುವುದು.. ಪಾದಗಳ ಪಾಡಂತೂ ಹೇಳುವುದೇ ಬೇಡ. ಚಳಿಗಾಲದಲ್ಲಿ ಎದುರಾಗುವ ತ್ವಚೆ ಸಮಸ್ಯೆಗೆ  ಸರಳ ಸುಲಭ ಮನೆ ಮದ್ದು ಇಲ್ಲಿದ್ದು ಅಳವಡಿಸಿಕೊಳ್ಳಿ ಚಳಿಗಾಲದಲ್ಲಿಯೇ ಸುಂದರ ಹಾಗೂ ಆಕರ್ಷಕ ತ್ವಚೆಯನ್ನು ಪಡೆಯಬಹುದು.

ಎಣ್ಣೆ ಮಸಾಜ್ : ಸ್ನಾನಕ್ಕೂ ಮುನ್ನ ಆಲೀವ್, ಬಾದಾಮಿ ಅಥವಾ ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಚರ್ಮಕ್ಕೆ ಲೇಪಿಸಿ ಹದಿನೈದು ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ.

ಕೊಬ್ಬರಿ ಎಣ್ಣೆಯನ್ನು ನೇರವಾಗಿ ಚರ್ಮಕ್ಕೆ ಹಚ್ಚದೆ ಸ್ನಾನ ಪೂರೈಸಿದ ನಂತರ ಕೊನೆಯ ನಾಲ್ಕು ಚೊಂಬು ನೀರಿಗೆ ಹತ್ತು ಹನಿ ಕೊಬ್ಬರಿ ಎಣ್ಣೆ ಹಾಕಿ ಮೈ ಮೇಲೆ ಸುರಿದುಕೊಳ್ಳಿ.

 ಹಸಿ ಹಾಲು, ಬೆಣ್ಣೆ ಮಸಾಜ್ ;  ಹಸಿ ಹಾಲಿನ ಮಸಾಜ್ ಚರ್ಮದ ಸೌಂದರ್ಯಕ್ಕೆ ಅತಿ ಉತ್ತಮವಾಗಿದ್ದು ಇದನ್ನು ಮೈಗೆಲ್ಲ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ಸ್ನಾನ ಮಾಡಬೇಕು.

ರಾತ್ರಿ ವೇಳೆಯಲ್ಲಿ ಕೆನೆ ಅಥವಾ ಬೆಣ್ಣೆಗೆ ಸ್ವಲ್ಪ ಉಪ್ಪು ಸೇರಿಸಿ ಮಸಾಜ್ ಮಾಡಿ ಬೆಳಿಗ್ಗೆ ಸ್ನಾನ ಮಾಡಿದರೆ ಚರ್ಮವೂ ಬಿರಿಯುವುದಿಲ್ಲ.

ಸೋಪು ಬೇಡ : ಸ್ನಾನಕ್ಕೆ ಸೋಪು ವರ್ಜಿಸಿ ಕಡಲೆ ಹಿಟ್ಟು, ಮೆಂತೆ, ಹೆಸರುಬೇಳೆ ಹಿಟ್ಟು ಬಳಸಿ, ಪರಿಮಳಕ್ಕಾಗಿ ನೀರಿಗೆ ಗಂಧದ ಎಣ್ಣೆ, ಗುಲಾಬಿ ಜಲವನ್ನು ನೀರಿಗೆ ಸೇರಿಸಿಕೊಳ್ಳಬಹುದು.

ತುಟಿಗಳ ಬಿರುಕು ನಿವಾರಣೆಗೆ ಬೆಣ್ಣೆಗೆ ನಾಲ್ಕು ಹನಿ ಜೇನುತುಪ್ಪ ಸೇರಿಸಿ ಹಚ್ಚಿ ಮಸಾಜ್ ಮಾಡಿ.

ಹಾಲಿನ ಕೆನೆಗೆ ಗುಲಾಬಿ ಜಲ ಸೇರಿಸಿ ಮಸಾಜ್ ಮಾಡುವುದರಿಂದ ಕಣ್ಣಿನ ಸುತ್ತಲಿನ ಕಪ್ಪು ವರ್ತುಲವು ಕಡಿಮೆಯಾಗುವುದು.

ಹಿಮ್ಮಡಿ : ಚಳಿಗಾಲದಲ್ಲಿ ಹಿಮ್ಮಡಿ ಒಡೆದು ಸಾಕಷ್ಟು ನೋವು ಯಾತನೆ ನೀಡುವುದು. ಇದರ ಪರಿಹಾರಕ್ಕೆ ರಾತ್ರಿ ಮಲಗುವ ಮುನ್ನ ಒಂದು ಚಮಚ ಹರಳೆಣ್ಣೆಗೆ ತಾಂಬೂಲಕ್ಕೆ ಬಳಸುವ ಚಿಟಿಕೆ ಸುಣ್ಣವನ್ನು ಮಿಶ್ರಣ ಮಾಡಿ ಐದು ನಿಮಿಷಗಳ ಕಾಲ ಚನ್ನಾಗಿ ಕಲೆಸಿ ಲೇಪನವನ್ನು ಪಾದಗಳ ಬಿರುಕಿಗೆ ಹಚ್ಚಿದರೆ ಕ್ರಮೇಣ ಪಾದಗಳ ಬಿರುಕು ಹಾಗೂ ನೋವು ಮಾಯವಾಗುವುದು.

ಕೂದಲಿಗೆ : ತೆಂಗಿನ ಕಾಯಿ ತುರಿಯನ್ನು ಸಣ್ಣಗೆ ರುಬ್ಬಿಕೊಂಡು ತಲೆಗೂದಲಿಗೆ ಹಚ್ಚಿ ಮಸಾಜ್ ಮಾಡಿ ಅರ್ಥ ಗಂಟೆಯ ನಂತರ ಸ್ನಾನ ಮಾಡುವುದರಿಂದ ಕೂದಲಿನ ಸೌಂದರ್ಯವು ಹೆಚ್ಚಿ ಶುಷ್ಕತೆ ದೂರವಾಗಿ ಹೊಳಪು ಮೂಡಿ ನೀಳ ದಟ್ಟ ಕೇಶ ರಾಶಿ ನಿಮ್ಮದಾಗುವುದು. ತಿಂಗಳಿಗೊಮ್ಮೆ  ಈ ಚಿಕಿತ್ಸೆ ಮಾಡುವುದರಿಂದ ಉತ್ತಮ ಫಲಿತಾಂಶ ಬರುವುದು.30-1coconut

ಚರ್ಮಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅಮ್ಲಜನಕ ಪೂರೈಕೆಯಾಗಬೇಕು. ಆದ್ದರಿಂದ ದಿನದ ಸ್ವಲ್ಪ ಸಮಯ ಉಣ್ಣೆಯ ಉಡುಪುಗಳನ್ನು ಧರಿಸದೆ ಹತ್ತಿ ಬಟ್ಟೆಗಳನ್ನು ಧರಿಸಬೇಕು.

ಬಟ್ಟೆ : ಚಳಿಯ ವೇಳೆಯಲ್ಲಿ ಹೊರ ಹೋಗಬೇಕಾಗಿ ಬಂದರೆ ಉಣ್ಣೆಯ ಉಡುಪು ಹಾಗೂ ಕಾಲು ಚೀಲ ಧರಿಸಿ.

ಈ ಎಲ್ಲಾ ಸೂತ್ರಗಳನ್ನು ಅಳವಡಿಸಿಕೊಂಡಲ್ಲಿ ಚಳಿಗಾಲದಲ್ಲಿ ಉದ್ಭವಿಸುವ ತ್ವಚೆಯ ಸಮಸ್ಯೆಯು ದೂರವಾಗಿ ಸದಾ ನಳನಳಿಸುವ ಮೃದು ತ್ವಚೆ ನಿಮ್ಮದಾಗುವುದು.1462801310-5116

 

Leave a Reply

comments

Related Articles

error: