ಕ್ರೀಡೆ

ಯುಎಸ್ ಓಪನ್ ಗೆದ್ದವರಿಗೆ ಭರ್ಜರಿ ಬಹುಮಾನ

ನ್ಯೂಯಾರ್ಕ್, ಜುಲೈ.20: ಯುಎಸ್ ಓಪನ್ ಗ್ರ್ಯಾಂಡ್ ಸ್ಲಾಂ ಟೆನಿಸ್ ಪಂದ್ಯಾವಳಿಯ ಪ್ರಶಸ್ತಿ ಮೊತ್ತದಲ್ಲಿ ಭರ್ಜರಿ ಏರಿಕೆಯಾಗಿದೆ.

2017ರ ಪುರುಷರ ಮತ್ತು ಮಹಿಳಾ ಸಿಂಗಲ್ಸ್ ಚಾಂಪಿಯನ್ನರಿಗೆ 23.78 ಕೋಟಿ ರುಪಾಯಿ ಬಹುಮಾನ ದೊರೆಯಲಿದೆ. ಕಳೆದ ವರ್ಷದ ಯುಎಸ್ ಸಿಂಗಲ್ಸ್ ವಿಜೇತರಿಗೆ 22.5 ಕೋಟಿ ರುಪಾಯಿ ಬಹುಮಾನ ನೀಡಲಾಗುತ್ತಿತ್ತು. ಈಗ 23.78 ಕೋಟಿ ರುಪಾಯಿಗೆ ಹೆಚ್ಚಿಸುವ ಮೂಲಕ ಉಳಿದ ಮೂರು ಗ್ರ್ಯಾಂಡ್ ಸ್ಲಾಂಗಳಿಗಿಂತ ಯುಎಸ್ ಓಪನ್ ಪ್ರಶಸ್ತಿ ಮೊತ್ತ ಹೆಚ್ಚಿದಂತಾಗಿದೆ. 2017ರ ವಿಂಬಲ್ಡನ್ ಸಿಂಗಲ್ಸ್ ವಿಜೇತರಿಗೆ ರು.18.43 ಕೋಟಿ, ಆಸ್ಟ್ರೇಲಿಯನ್ ಓಪನ್ ರು.18.87 ಕೋಟಿ ಹಾಗೂ ಫ್ರೆಂಚ್ ಓಪನ್ ಗೆದ್ದವರಿಗೆ ರು.15.56 ಕೋಟಿ ಬಹುಮಾನ ನೀಡಲಾಗುತ್ತಿದೆ. ಈ ಬಾರಿಯ ಯುಎಸ್ ಓಪನ್ ಆಗಸ್ಟ್ 28ರಿಂದ ಆರಂಭವಾಗಲಿದೆ. (ವರದಿ: ಪಿ.ಜೆ)

Leave a Reply

comments

Related Articles

error: