ಮೈಸೂರು

ನಾಡಿನ ಏಳಿಗೆಗೆ ವೀರಶೈವ-ಲಿಂಗಾಯಿತರು ಒಗ್ಗೂಡಿ ಶ್ರಮಿಸಬೇಕಿದೆ: ಈಶ್ವರ ಖಂಡ್ರೆ

ಮೈಸೂರು, ಜು.೨೦: ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಥಾಪಕ ಹಾನಗಲ್ ಕುಮಾರಸ್ವಾಮಿಯವರ ೧೫೦ನೇ ಜಯಂತಿ ಅಂಗವಾಗಿ ಉಪನ್ಯಾಸ ಕಾರ್ಯಕ್ರಮವನ್ನು ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಪೌರಾಡಳಿತ ಖಾತೆ ಸಚಿವ ಈಶ್ವರಖಂಡ್ರೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವೀರಶೈವ ಧರ್ಮಕ್ಕೆ ಸನಾತನ ಇತಿಹಾಸವಿದೆ. ವೀರಶೈವ ಸಮಾಜದಲ್ಲಿ ಜನಿಸಿದ ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ್ದರು. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವವನ್ನು ಎಲ್ಲೆಡೆ ಸಾರಿದ್ದರು. ವೀರಶೈವ ಧರ್ಮ ಲೋಕ ಕಲ್ಯಾಣಕ್ಕೆ, ಸಮಾಜದ ಒಳಿತಿಗಾಗಿ ಶ್ರಮಿಸಿದ ವಿಶಿಷ್ಟ ಧರ್ಮವಾಗಿದ್ದು ಇಂತಹ ಧರ್ಮದ ಉಳಿವಿಗೆ ಹಾಗೂ ನಾಡಿನ ಏಳಿಗೆಗೆ ವೀರಶೈವರು ಹಾಗೂ ಲಿಂಗಾಯಿತರು ಒಗ್ಗೂಡಿ ಮುನ್ನಡೆಯಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಹೊಸಮಠದ ಚಿದಾನಂದ ಸ್ವಾಮೀಜಿ, ಮಲ್ಲನ ಮೂಲೆ ಮಠದ ಚನ್ನಬಸವ ದೇಶೀಕೇಂದ್ರ ಮಹಾಸ್ವಾಮೀಜಿ, ಹುಕ್ಕೇರಿ ಮಠದ ಸದಾಶಿವಸ್ವಾಮೀಜಿ, ವಿರಕ್ತಮಠ ಅಕ್ಕಿಹಾಲೂರು ಶಿವಬಸವ ಸ್ವಾಮೀಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: