ಮೈಸೂರು

ಉನ್ನತ ಸಾಧನೆಯನ್ನು ಮಾಡಲು ಧೈರ್ಯವನ್ನು ಮೈಗೂಡಿಸಿಕೊಳ್ಳಿ : ಶ್ವೇತಾ ಮಡಪ್ಪಾಡಿ

ಮೈಸೂರು,ಜು.21:- ಅಖಿಲ ಭಾರತ ಮಹಿಳಾ ಸಾಹಿತ್ಯ ಪರಿಷತ್ ಕದಳಿ ಮಹಿಳಾ ವೇದಿಕೆ ತಿಂಗಳ ಅತಿಥಿ ಕಾರ್ಯಕ್ರಮವನ್ನು ಕುವೆಂಪುನಗರದ ಮಕ್ಕಳ ಮನೆಯಲ್ಲಿ ಆಯೋಜಿಸಲಾಗಿತ್ತು.

ಜುಲೈ ತಿಂಗಳ ಅತಿಥಿಯಾಗಿ ಲೇಖಕಿ ಹಾಗೂ ಗಾಯಕಿ ಶ್ವೇತಾ ಮಡಪ್ಪಾಡಿ ಭಾಗವಹಿಸಿದ್ದರು. ಹೆಣ್ಣು ಮಕ್ಕಳು ಉನ್ನತ ಸಾಧನೆಯನ್ನು ಮಾಡಲು ಧೈರ್ಯವನ್ನು ಮೈಗೂಡಿಸಿಕೊಳ್ಳಬೇಕು. ಸಮಾಜದಲ್ಲಿ ಹೆಣ್ಣುಮಕ್ಕಲ ಮೇಲೆ ಭಿನ್ನ ಬಗೆಯ ಶೋಷಣೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಧೈರ್ಯವೊಂದನ್ನೇ ಅಸ್ತ್ರವಾಗಿಸಿ ಮುನ್ನುಗ್ಗಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು. ಅಪರಾಧಿಗಳೆನಿಸಿ ಜೈಲಿಗೆ ಹೋದವರ ಮಕ್ಕಳನ್ನು ಈ ಮಕ್ಕಳ ಮನೆ ಸಲಹುತ್ತಿರುವುದು ಅಭಿನಂದನಾರ್ಯ. ತಂದೆತಾಯಿ ಜೊತೆಗಿರದೇ ಸಾಧನೆ ಮಾಡಿ ಹಲವರು ನಮಗಿಂದು ಮಾದರಿಯಾಗಿದ್ದಾರೆ. ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಯಾರೂ ತಿದ್ದದೇ ಇರುವ ತಪ್ಪುಗಳನ್ನು ಪುಸ್ತಕ ತಿದ್ದುತ್ತದೆ ಅಲ್ಲದೇ ಉತ್ತಮ ಬರವಣಿಗೆಯು ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಕಲ್ಯಾಣಿ ನಟರಾಜಪ್ಪ, ಕಾರ್ಯದರ್ಶಿ ಧನ್ಯಾ ಸತ್ಯೇಂದ್ರ ಮೂರ್ತಿ,ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: