ಕರ್ನಾಟಕಮೈಸೂರು

ಇಂದು ಚೆಸ್ಕಾಂ ಆನ್‍ಲೈನ್‍ ಪಾವತಿ ವ್ಯವಸ್ಥೆಯಲ್ಲಿ ವ್ಯತ್ಯಯ

ಮಂಡ್ಯ, ಜುಲೈ 21 : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವ್ಯಾಪ್ತಿಯ ಮಂಡ್ಯ, ಮಳವಳ್ಳಿ, ನಗರಗಳಲ್ಲಿ ಜುಲೈ 21 ರ ಸಂಜೆ 6 ಘಂಟೆಯಿಂದ ಜುಲೈ 24 ರ ಬೆಳಿಗ್ಗೆ 9 ಘಂಟೆಯವರೆಗೆ ಆರ್.ಎ.ಪಿ.ಡಿ.ಆರ್.ಪಿ. ತಂತ್ರಾಂಶದ ತುರ್ತು ನಿರ್ವಹಣಾಕಾರ್ಯವನ್ನು ಕೈಗೊಂಡಿರುವುದರಿಂದ ಆರ್.ಎ.ಪಿ.ಡಿ.ಆರ್.ಪಿ. ತಂತ್ರಾಂಶಗಳಾದ ಚಾ.ವಿ.ಸ.ನಿ.ನಿ.ಯ. ವಿದ್ಯುನ್ಮಾನ ಪಾವತಿ (www.cescmysore.org) ಕರ್ನಾಟಕ ಮೊಬೈಲ್‍ಒನ್  ಮತ್ತು ಚಾ.ವಿ.ಸ.ನಿ.ನಿ.ಯ ವಿದ್ಯುನ್ಮಾನ ಹೊಸ ಸಂಪರ್ಕ ತಂತ್ರಾಂಶ (www.infoviewportal) ಕಾರ್ಯನಿರ್ವಹಣೆ ಮಾಡುವುದಿಲ್ಲ. ಗ್ರಾಹಕರು ಕಂಪನಿಯೊಂದಿಗೆ ಸಹಕರಿಸಬೇಕು ಎಂದು ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎ.ಟಿ.ಪಿ ಯಂತ್ರವು ಹಾಗೂ ಸೆಸ್ಕಾಂನ ನಗದು ಕೌಂಟರ್‍ಗಳು (ಕ್ಯಾಶ್‍ಕೌಂಟರ್) ಎಂದಿನಂತೆ ಆಫ್‍ಲೈನ್ ತಂತ್ರಾಂಶದ ಮುಖಾಂತರ ಕಾರ್ಯನಿರ್ವಹಣೆ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: