ಮೈಸೂರು

ಸರ್ಕಾರದ ಯೋಜನೆ ಸಕಾಲಕ್ಕೆ ನಿರ್ಗತಿಕರನ್ನು ತಲುಪಲಿ: ದಸಂಸ ಒತ್ತಾಯ

ಬಡತನ ರೇಖೆಗಿಂತ ಕೆಳಗಿರುವ ಯಾವುದೇ ಕುಟುಂಬದ ಸದಸ್ಯರು ಮರಣ ಹೊಂದಿದರೆ ಆ ಕುಟುಂಬಕ್ಕೆ ಸರ್ಕಾರ ಶವಸಂಸ್ಕಾರ ಮಾಡಲು ಐದು ಸಾವಿರ ರೂ. ಹಣವನ್ನು ನೀಡಲಿದೆ. ಆದರೆ ಈ ಯೋಜನೆ ಜಾರಿಯಾಗಿ ಒಂದು ವರ್ಷ ಕಳೆದರೂ ಸರ್ಕಾರ ಶವ ಸಂಸ್ಕಾರಕ್ಕೆ ಯಾವುದೇ ಹಣವನ್ನು ನೀಡಿಲ್ಲ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ  ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮೈಸೂರು ಜಿಲ್ಲೆಯಲ್ಲಿ ಬಾಕಿ ಇರುವ ಆರು ಸಾವಿರ ಶವಸಂಸ್ಕಾರದ ಅರ್ಜಿಗಳಿಗೆ 3ಕೋಟಿ ರೂ. ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಇನ್ನು ಮುಂದೆ ಶವಸಂಸ್ಕಾರದ ಐದು ಸಾವಿರ ರೂ.ಹಣವನ್ನು ಖಜಾನೆ ಮೂಲಕ ತಕ್ಷಣವೇ ಕೊಡುವ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು. ಸರ್ಕಾರ ತರುವ ಯಾವುದೇ ಯೋಜನೆಗಳು ನಿರ್ಗತಿಕ ಕುಟುಂಬಗಳಿಗೆ ಸಕಾಲಕ್ಕೆ ತಲುಪುವ ವ್ಯವಸ್ಥೆ ಜಾರಿಯಾಗಬೇಕು ಎಂದು ಒತ್ತಾಯಿಸಿದರಲ್ಲದೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ, ಹೆಚ್.ಬಿ.ದಿವಾಕರ್, ಪುಟ್ಟ ಲಕ್ಷ್ಮಮ್ಮ, ಚಾಮರಾಜ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

comments

Related Articles

error: