ವಿದೇಶ

ರಕ್ತದಲ್ಲಿ ಸ್ನಾನ ಮಾಡುವ ರಾಷ್ಟ್ರಧ್ಯಕ್ಷ..!

ಮಾಸ್ಕೋ,ಜು.21-ಎಲ್ಲರೂ ನೀರು, ಶಾಂಪು, ಸೋಪ್ ನಲ್ಲಿ ಸ್ನಾನ ಮಾಡಿದರೆ ಎಲ್ಲೊಬ್ಬ ವ್ಯಕ್ತಿ ಸ್ನಾನ ಮಾಡಲು ರಕ್ತ ಬಳಸುತ್ತಾನಂತೆ.

ಹೌದು, ರಷ್ಯಾದ ಅಧ್ಯಕ್ಷ ವ್ಲಾದಿಮರ್ ಪುಟಿನ್ ಜಿಂಕೆಯ ರಕ್ತದಲ್ಲಿ ಸ್ನಾನ ಮಾಡುತ್ತಾರೆ. ರಷ್ಯಾದ ಪ್ರಾಚೀನ ಸಂಪ್ರದಾಯದಂತೆ ಜಿಂಕೆಯ ರಕ್ತದಲ್ಲಿ ಸ್ನಾನ ಮಾಡಿದರೆ ಪುರುಷರ ಆರೋಗ್ಯ ಮತ್ತು ಲೈಂಗಿಕ ಶಕ್ತಿ ಹೆಚ್ಚುತ್ತದ್ದಂತೆ. ಹೀಗಾಗಿ ರಷ್ಯಾದಲ್ಲಿ ದೊಡ್ಡ ಕೊಂಬಿನ ಜಿಂಕೆಯ ರಕ್ತಕ್ಕೆ ಭಾರೀ ಬೇಡಿಕೆ ಇದೆ.

ವ್ಲಾದಿಮರ್ ಪುಟಿನ್ ಆಲ್ಫಾಯ್ ಪರ್ವತಕ್ಕೆ ಪ್ರವಾಸ ಕೈಗೊಂಡಿದ್ದ ಸಂದರ್ಣಭದಲ್ಲಿ ಅಧಿಕಾರಿಗಳಿಗೆ ಈ ವಿಶೇಷ ಕಾರ್ಯ ನೀಡಲಾಗಿದೆ. ಅಧ್ಯಕ್ಷರಿಗಾಗಿ ಸ್ನಾನದ ತೊಟ್ಟಿಯನ್ನು ಸಿದ್ಧಪಡಿಸಿ, ಅದಕ್ಕೆ ಹಲವು ದೊಡ್ಡ ಜಿಂಕೆಯ ಕೊಂಬು ಕತ್ತರಿಸಿ ತೆಗೆದ ರಕ್ತವನ್ನು ತುಂಬಿಸಲಾಗಿದೆ ಎಂದು ವರದಿಯಾಗಿದೆ.

ವ್ಲಾದಿಮರ್ ಪುಟಿನ್ ಯಾವಾಗಲೂ ರಕ್ತದಲ್ಲಿ ಸ್ನಾನ ಮಾಡುವ ಸಂಪ್ರದಾಯ ಅನುಸರಿಸುವುದಿಲ್ಲ. ಆದರೆ, ಹಲವು ಸಲ ಅವರು ಜಿಂಕೆಯ ರಕ್ತದಲ್ಲಿ ಸ್ನಾನ ಮಾಡಿದ್ದಾರೆ ಎಂದು ಹೇಳಲಾಗಿದೆ. (ವರದಿ-ಎಂ.ಎನ್)

 

Leave a Reply

comments

Related Articles

error: