ಮೈಸೂರು

ಕೆ.ಹರೀಶ್ ಗೌಡ ಹುಟ್ಟು ಹಬ್ಬ : ರಕ್ತದಾನ ಹಾಗೂ ಉದ್ಯೋಗ ಮೇಳ

ಮೈಸೂರು,ಜು.21 : ಕೆ.ಹರೀಶ್  ಗೌಡರ ಹುಟ್ಟುಹಬ್ಬದ ಪ್ರಯುಕ್ತ ಸ್ನೆಹ ಬಳಗದ ವತಿಯಿಂದ ಬೃಹತ್ ಉದ್ಯೋಗ ಮೇಳ ಹಾಗೂ ಅಭಿಮಾನಿಗಳಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಜೆ.ಡಿಎಸ್ ಪ್ರಧಾನ ಕಾರ್ಯದರ್ಶಿ ಎಂ.ಬಸವರಾಜು ತಿಳಿಸಿದರು.

ನಗರದ ಜೆ.ಕೆ.ಮೈದಾನದಲ್ಲಿ ಜು.23ರ ಬೆಳಗ್ಗೆ 10ಕ್ಕೆ ಆಯೋಜಿಸಿರುವ ಕಾರ್ಯಕ್ರಮವನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಉದ್ಘಾಟಿಸುವರು, ಸಂಪಾದಕ ರಾಜಶೇಖರ ಕೋಟಿ ಅಧ್ಯಕ್ಷತೆ ವಹಿಸುವರು, ಭಾಷ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು ಎಂದು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ , ಚಿಕ್ಕಮಾದು, ಮಾಜಿ ಸಚಿವ ವಿಶ್ವನಾಥ್, ಮೇಯರ್ ಎಂ.ಜೆ.ರವಿಕುಮಾರ್, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜು, ಜಿ.ಪಂ ಅಧ್ಯಕ್ಷ ನಹಿಮಾ ಸುಲ್ತಾನ ಇತರರು ಭಾಗವಹಿಸುವರು.

ಉದ್ಯೋಗ ಮೇಳದಲ್ಲಿ ರಾಜ್ಯ ಸುಮಾರು 140ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಪಾಲ್ಗೊಳ್ಳುವವು, ಡಿಪ್ಲೊಮೊ, ಪದವೀದರರು, ಇಂಜಿನಿಯರಿಂಗ್  ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣವಕಾಶವಾಗಿದೆ ಉದ್ಯೋಗ ಮೇಳವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಆಶಿಸಿದರು.

ರಕ್ತದಾನದಲ್ಲಿ ಶೇಖರಣೆಯಾದ ರಕ್ತವನ್ನು ಡೆಂಘೆ, ಚಿಕನ್ ಗುನ್ಯಾ ಇನ್ನಿತರ ರೋಗಗಳಿಂದ ಬಳಲುವರಿಗೆ ಪೂರೈಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಂ.ಟಿ.ಮುಸ್ತಾಫ್, ಗಿರೀಶ್, ಮಂಜುನಾಥ್, ರುಕ್ಮಾಂಗದ, ರವಿ ಮೊದಲಾದವರು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: