ಮನರಂಜನೆ

ಶ್ರದ್ಧಾ ಕಪೂರ್ ಗೆ ವಿಚಿತ್ರ ಬೇಡಿಕೆಯಿಟ್ಟ ಅಭಿಮಾನಿ !

ಮುಂಬೈ, ಜು.21: ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಗೆ ಅಭಿಮಾನಿಯೊಬ್ಬ ವಿಚಿತ್ರ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಅದೇನಂತಿರಾ? ಆ ಅಭಿಮಾನಿಗೆ ತನ್ನ ಎಡ ಕಿಡ್ನಿ ಮೇಲೆ ಶ್ರದ್ಧಾ ಆಟೋಗ್ರಾಫ್ ಹಾಕಿಕೊಡಬೇಕಂತೆ!. ಹೌದು. ಇದು ವಿಚಿತ್ರ ಎನಿಸಿದರೂ ಸತ್ಯ.

ಟ್ವೀಟ್ಟರ್ ಚಾಟ್ ಮಾಡುವ ವೇಳೆ ತನ್ನ ಬೇಡಿಕೆಯನ್ನು ಹೇಳಿಕೊಂಡಿರುವ ಆತ, ನಾನು ನಿಮ್ಮ ದೊಡ್ಡ ಅಭಿಮಾನಿ. ನನ್ನ ಎಡ ಕಿಡ್ನಿ ಮೇಲೆ ಆಟೋಗ್ರಾಫ್ ಹಾಕ್ತೀರಾ ಎಂದು ಕೇಳಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಶ್ರದ್ಧಾ ಪೇಪರ್ ಮೇಲೆ ಹಾಕ್ತೀನಿ ಎಂದಿದ್ದಾಳೆ. ಸದ್ಯ ಶ್ರದ್ಧಾ  ಹಸೀನಾ ಪಾರ್ಕರ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾಳೆ. ಈ ಚಿತ್ರದ ಪ್ರಚಾರಕ್ಕಾಗಿಯೇ ಟ್ವೀಟರ್ ಚಾಟ್ ಮಾಡುತ್ತಿದ್ದ ವೇಳೆ ಅಭಿಮಾನಿಗಳು ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆ ಕಪೂರ್ ಮನಬಿಚ್ಚಿ ಉತ್ತರ ನೀಡಿದ್ದಾಳೆ.

ಟ್ವೀಟರ್ ಚಾಟ್ ವೇಳೆ ಅಭಿಮಾನಿಗಳಿಗೆ ತನ್ನ ತೂಕ ಏರಿಕೆಯಾಗಿರುವುದನ್ನೂ ಹೇಳಿದ್ದಾಳೆ. ಶ್ರದ್ಧಾ  ಚಿತ್ರಕ್ಕಾಗಿ ನಟಿ 7-8 ಕೆ.ಜಿ ತೂಕ ಏರಿಸಿಕೊಂಡಿದ್ದಾಳಂತೆ. ಈಗ ಅದನ್ನು ಇಳಿಸುವ ಪ್ರಯತ್ನದಲ್ಲಿದ್ದಾಳಂತೆ. ಇದೇ ಮೊದಲ ಬಾರಿ ಬಯೋಪಿಕ್ ಚಿತ್ರದಲ್ಲಿ ಶ್ರದ್ಧಾ ಕಾಣಿಸಿಕೊಳ್ತಿದ್ದಾಳೆ. ಆಗಸ್ಟ್ 15ರಂದು ಹಸೀನಾ ಪಾರ್ಕರ್ ಚಿತ್ರ ತೆರೆಗೆ ಬರ್ತಿದೆ. ಇದಾದ ಮೇಲೆ ಸೈನಾ ನೆಹ್ವಾಲ್ ಜೀವನಾಧಾರಿತ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳಂತೆ ಶ್ರದ್ಧಾ. ಇದಕ್ಕಾಗಿ ಬೆಳಿಗ್ಗೆ ಬೇಗ ಎದ್ದು ಬ್ಯಾಡ್ಮಿಂಟನ್ ಆಡುತ್ತಿದ್ದಾಳಂತೆ. (ವರದಿ: ಎಲ್.ಜಿ)

 

Leave a Reply

comments

Related Articles

error: