ಮೈಸೂರು

ಅಕ್ಟೋಬರ್ 22-23 ಕ್ರೆಡಿಟ್ –ಐ ಸಂಸ್ಥೆಯ 10 ನೇ ವಾರ್ಷಿಕೋತ್ಸವ ಸಮಾರಂಭ

ಸಾಮಾಜಿಕ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಕ್ರೆಡಿಟ್-ಐ ಸಂಸ್ಥೆಯು ತನ್ನ 10 ನೇ ವರ್ಷದ ಸಾರ್ಥಕ ಸೇವೆಯ ಸಂಭ್ರಮಾಚರಣೆಯನ್ನು ಆಚರಿಸಲಿದ್ದು  ಈ ಪ್ರಯುಕ್ತ ಅ.22 ಮತ್ತು 23 ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಡಾ.ಎಂ.ಪಿ.ವರ್ಷ ಹೇಳಿದರು.

ಮೈಸೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಕ್ಟೋಬರ್ 22 ರಂದು ಬೆಳಿಗ್ಗೆ 10 ಗಂಟೆಗೆ ಜೆ.ಎಲ್.ಬಿ ರಸ್ತೆಯ ರೋಟರಿ ಶಾಲೆಯ ಸಭಾಂಗಣದಲ್ಲಿ ವಿಶ್ವವಿದ್ಯಾನಿಲಯ ಮಟ್ಟದ ‘ಮೂಲ ಜಾನಪದ ಗೀತೆ’ ಗಾಯನ ಸ್ಪರ್ಧೆ. 11.30 ಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್. ಘಟಕದ ಮಾಜಿ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ. ಬಿ.ಕೆ.ಶಿವಣ್ಣ ನವರಿಗೆ ‘ಗುರುವಂದನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅಕ್ಟೋಬರ್ 23 ಬೆಳಿಗ್ಗೆ 10 ಗಂಟೆಗೆ ಜಗನ್ಮೋಹನ ಅರಮನೆಯಲ್ಲಿ ‘ಆರೋಗ್ಯಕರ ಸಮಾಜ ಹಾಗೂ ಬದಲಾಗುತ್ತಿರುವ ಮೌಲ್ಯಗಳು’ ಕುರಿತು ವಿಚಾರ ಸಂಕಿರಣ. ಸಂಜೆ 4 ಗಂಟೆಗೆ  ಸ್ಪಂದನ, ಮಾದರಿ ಗ್ರಾಮ, ಮಲಾರ ಗ್ರಾಮ, ನೆಲೆ, ಪರಸ್ಪರ ಈ 4 ನೂತನ ಅಭಿವೃದ್ಧಿಪರ ಯೋಜನೆಗಳ ಲೋಕಾರ್ಪಣೆ, ಮತ್ತು  ಕೊಡಗು ಜಿಲ್ಲೆಯ ಖ್ಯಾತ ಹಾಕಿ ಆಟಗಾರ ರಘುನಾಥ್ ವಿ.ಆರ್. ಅವರಿಗೆ ‘ಕರ್ನಾಟಕದ ಕಣ್ಮಣಿ ರಾಜ್ಯಪ್ರಶಸ್ತಿ’ ನೀಡಲಾಗುತ್ತದೆ. ಇದೇ ಸಂದರ್ಭದಲ್ಲಿ ಮೈಸೂರು ಜಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದ ಕಿರು ಉದ್ಯಮಿಗಳನ್ನು ಪ್ರೋತ್ಸಾಹಿಸಲು ಅವರ ಉತ್ಪನ್ನಗಳ ‘ಪ್ರದರ್ಶನ ಹಾಗೂ ಮಾರಾಟಮೇಳ’ ದ ವ್ಯವಸ್ಥೆ ಮಾಡಲಾಗಿದೆ. ಭಾಗವಹಿಸಲು ಆಸಕ್ತಿಯಿರುವವರು ವ್ಯವಸ್ಥಾಪಕ ಟ್ರಸ್ಟಿ ಡಾ.ಎಂ.ಪಿ.ವರ್ಷ 9448988746 ಗೆ ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಹಿರಿಯ ಸಲಹೆಗಾರ್ತಿ ಎಚ್.ಎಂ.ವಸಂತಮ್ಮ, ಖಜಾಂಚಿ ಎಂ.ಆರ್. ಮಂಜುನಾಥ್, ಜರ್ಮನ್ ನ ಸ್ವಯಂ ಸೇವಕರಾದ ಲಿಯಾ ಮತ್ತು ಟಿಮ್ ಹಾಜರಿದ್ದರು.

Leave a Reply

comments

Related Articles

error: