ಮೈಸೂರು

ಅಕ್ಟೋಬರ್ 22: ಬಂಜಾರ ಯುವಕರಿಗೆ ಕ್ರಿಕೆಟ್ ಟೂರ್ನಮೆಂಟ್

ಬಂಜಾರ ಗೋರ್ ಸೀಕವಾಡಿ ಜಾಗೃತಿ ಸಾಮಾಜಿಕ ಚಳುವಳಿ’ ಸಂಘದ ವತಿಯಿಂದ ದೀಪಾವಳಿ ಪ್ರಯುಕ್ತ ಬಂಜಾರ ಸಮುದಾಯದ ಯುವಕರಿಗೆ ಕ್ರಿಕೆಟ್ ಟೂರ್ನಮೆಂಟ್ ನ್ನು ಹಮ್ಮಿಕೊಳ್ಳಲಾಗಿದೆ ಎಂದು  ಸಮುದಾಯದ ಗೌರವ ಸಲಹೆಗಾರ ಬಸವರಾಜ ನಾಯ್ಕ ಹೇಳಿದರು.

ಮೈಸೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ನಾಯ್ಕ ಮಾತನಾಡಿ ಅ.22 ರ ಬೆಳಿಗ್ಗೆ8.30 ಕ್ಕೆ ವಿಶ್ವೇಶ್ವರನಗರದ ರೈಲ್ವೇ ಕ್ರೀಡಾಂಗಣದಲ್ಲಿ ಕ್ರಿಕೆಟ್ ಟೂರ್ನಮೆಂಟ್ ನ್ನು ಏರ್ಪಡಿಸಲಾಗಿದ್ದು, 25 ಕ್ರಿಕೆಟ್ ತಂಡಗಳು ಭಾಗವಹಿಸಲಿವೆ. ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ.ಸೋಮಶೇಖರ್ ಹಾಗೂ ಸಮುದಾಯದ ರಾಷ್ಟ್ರನಾಯಕ ಅರುಣ್ ಚೌಹಾಣ್ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮುದಾಯದ ಪದಾಧಿಕಾರಿಗಳಾದ ಚಂದ್ರಶೇಖರ್ ಆರ್, ಕೃಷ್ಣ ನಾಯ್ಕ, ಗೋವಿಂದ ನಾಯ್ಕ, ನಾರಾಯಣ ನಾಯ್ಕ, ಚಂದ್ರಪ್ರಕಾಶ್ ನಾಯ್ಕ ಮತ್ತು ಗುಣಶೇಖರ್ ನಾಯ್ಕ ಹಾಜರಿದ್ದರು.

Leave a Reply

comments

Related Articles

error: