ಮೈಸೂರು

ಅಕ್ಟೋಬರ್ 22: ಡಾ.ಚಿಂತನ ಭರತನಾಟ್ಯ ರಂಗಪ್ರವೇಶ

 

ಶ್ರೀ ನಿಮಿಷಾಂಬಾ ನೃತ್ಯ ಶಾಲೆಯ ಡಾ.ಚಿಂತನ ಪಾಟ್ಕರ್ ಅವರು ಭರತನಾಟ್ಯ ರಂಗಪ್ರವೇಶ ಮಾಡುತ್ತಿದ್ದಾರೆ ಎಂದು ವಿದ್ವಾನ್ ಶ್ರೀಧರ್ ಜೈನ್ ತಿಳಿಸಿದರು.

ಮೈಸೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀಧರ್ ಜೈನ್ ಮಾತನಾಡಿ ಅ.22 ರ ಸಂಜೆ 6 ಗಂಟೆಗೆ ಜಗನ್ಮೋಹನ ಅರಮನೆಯಲ್ಲಿ ಡಾ.ಚಿಂತನಾ ಪಾಟ್ಕರ್ ಭರತನಾಟ್ಯ ರಂಗಪ್ರವೇಶ ಮಾಡುತ್ತಿದ್ದಾರೆ. ಇವರು ವೃತ್ತಿಯಲ್ಲಿ ವೈದ್ಯೆಯಾದರೂ ಇವರಿಗೆ ಭರತನಾಟ್ಯದಲ್ಲಿ ಹೆಚ್ಚಿನ ಆಸಕ್ತಿಯಿದೆ. ಇವರು ಭರತನಾಟ್ಯದಲ್ಲಿ ತಮ್ಮ ಅದ್ಭುತ ಪ್ರತಿಭೆ ತೋರಿಸಿರುವುದರಿಂದ ರಂಗಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ವಾಸು, ನಟಿ ಮತ್ತು ನೃತ್ಯ ಕಲಾವಿದೆ ಡಾ.ಸೀತಾ ಕೋಟೆ, ಸಾಹಿತಿ ಹನೂರು ಚೆನ್ನಪ್ಪ, ನೃತ್ಯ ಕಲಾವಿದೆ ಡಾ.ರಾಜೇಶ್ವರಿ ಮಾದಪ್ಪ ಪಾಲ್ಗೊಳ್ಳಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಚಿಂತನಾ ಪಾಟ್ಕರ್, ಸೌಮ್ಯ ಮತ್ತು ವರ್ಷ ಹಾಜರಿದ್ದರು.

Leave a Reply

comments

Related Articles

error: