ಮೈಸೂರು

ಮೊಬೈಲ್ ಗಳ ಐಎಂಇಐ ಸಂಖ್ಯೆಗಳನ್ನು ಬದಲಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಮೈಸೂರು, ಜು.21:-ಮೊಬೈಲ್ ಗಳ ಐಎಂಇಐ ಸಂಖ್ಯೆಗಳನ್ನು ಬದಲಿಸಿ ಮಾರಾಟ ಮಾಡುತ್ತಿದ್ದ  ಮುಖ್ಯವ್ಯಕ್ತಿಯನ್ನು  ಮೈಸೂರಿನ ಉದಯಗಿರಿ ಠಾಣೆ ಪೊಲೀಸರ ಕಾರ್ಯಾಚರಣೆ  ನಡೆಸಿ ಬಂಧಿಸಿದ್ದಾರೆ.
ಬಂಧಿತನನ್ನು ಮಂಗಳೂರು ಮೂಲದ ರವಿಪ್ರಸಾದ್ ಪೂಂಜಾ (50) ಎಂದು ಗುರುತಿಸಲಾಗಿದೆ. 5 ದಿನಗಳ ಹಿಂದೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.  ಆರೋಪಿಗಳು ದಾವಣಗೆರೆ, ಚಿತ್ರದುರ್ಗ, ಮಂಗಳೂರು, ಮೈಸೂರಿನಲ್ಲಿ ಮೊಬೈಲ್ ಗಳ ಐಎಂಇಐ ನಂಬರ್ ಗಳನ್ನು ಬದಲಿಸುವ ದಂಧೆ ನಡೆಸುತ್ತಿದ್ದರು. ಕೃತ್ಯಕ್ಕೆ ಸಂಬಂಧಿಸಿದಂತೆ ಮಹಮದ್ ಶೋಯಬ್ ಹಾಗೂ ಮಹಮದ್ ಖಾಸಿಫ್ ಎಂಬುವರನ್ನು ಬಂಧಿಸಲಾಗಿತ್ತು. ಆರೋಪಿಗಳ ಬಂಧನದ ನಂತರ ರವಿಪ್ರಸಾದ್ ಪೂಂಜಾ ತಲೆಮರೆಸಿಕೊಂಡಿದ್ದ.
ಇವರೆಲ್ಲ ಚೀನಾ ಹಾಗೂ ಯು.ಕೆ. ಯಿಂದ ಯಂತ್ರಗಳನ್ನು ತರಿಸಿಕೊಂಡು ಮೊಬೈಲ್ ಗಳ  ಐಎಂಇಐ ನಂಬರ್ ಗಳನ್ನು ಬದಲಿಸಿ ಮಾರಾಟ ಮಾಡುತ್ತಿದ್ದರು. ಉದಯಗಿರಿ ಠಾಣೆ ಪೊಲೀಸರು ಹೆಣೆದಿದ್ದ ಬಲೆಗೆ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದಾನೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: