ಮೈಸೂರು

ಪತ್ರಕರ್ತರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಸರ್ಕಾರಗಳು ಚಿಂತಿಸಬೇಕು : ಕೆ.ಎನ್.ಸೋಮಶೇಖರ್

ಮೈಸೂರು(ಬೈಲುಕುಪ್ಪೆ)ಜು.21:- ಸಮಾಜದಲ್ಲಿ ಓರೆಕೋರೆಗಳನ್ನು ಬೆಳಕಿಗೆ ತರುವ ಪತ್ರಕರ್ತರಿಗೆ ಸಾಮಾಜಿಕ ಭದ್ರತೆಯೇ ಇಲ್ಲದಂತಾಗಿದ್ದು, ಈ ಬಗ್ಗೆ ಸರಕಾರಗಳು ಚಿಂತಿಸಬೇಕು ಎಂದು ಪರಿಸರ ಹೋರಾಟಗಾರ ಕೆ.ಎನ್.ಸೋಮಶೇಖರ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಹಳೆಕೆರೆ ಹಾಡಿಯಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ಬಾಣಂತಿಯರಿಗೆ ಬ್ಲಾಂಕೆಟ್ ವಿತರಣೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಪತ್ರಕರ್ತರ ಕಷ್ಟಸುಖಗಳಿಗೆ ಸ್ಪಂದಿಸುವಂತೆ ಅಗತ್ಯವಾದ ಕ್ಷೇಮಾಭಿವೃದ್ದಿ ಸಂಘಗಳ ಅವಶ್ಯಕತೆ ಇದೆ. ಅನೇಕ ಗ್ರಾಮೀಣ ಭಾಗದ ಪತ್ರಕರ್ತರಿಗೆ ಅನೇಕ ಸೌಲಭ್ಯಗಳನ್ನು ಒದಗಿಸುವಲ್ಲಿ ಸರಕಾರಗಳು ಚಿಂತನೆ ನಡೆಸಬೇಕು ಮತ್ತು ಗಿರಿಜನರ ಸಮಸ್ಯೆಯನ್ನು ಬೆಳಕು ಚೆಲ್ಲುತಿದ್ದ ಪತ್ರಕರ್ತರು  ಪತ್ರಿಕಾ ದಿನಾಚರಣೆಯನ್ನು ಕಾಟಾಚಾರಕ್ಕೆ ಮಾಡದೆ ಹಾಡಿಯಲ್ಲಿ ಸೌಲಭ್ಯ ವಿತರಣೆ ಮಾಡುವ ಮೂಲಕ ಆಚರಣೆ ಮಾಡುತ್ತಿರುವುದು ಉತ್ತಮ ಚಿಂತನೆಯಾಗಿದ್ದು, ತಾಲೂಕಿನಲ್ಲಿ ಪತ್ರಿಕಾಭವನ ನಿರ್ಮಾಣ ಮಾಡಲು ಸಹಕಾರ ನೀಡುವುದಾಗಿ  ತಿಳಿಸಿದರು.
ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಹಿರಿಯ ಪತ್ರಕರ್ತ ಚಂದ್ರಮೋಹನ್ ಮಾತನಾಡಿ ಪತ್ರಕರ್ತರಿಗೆ ಸಾಮಾಜಿಕ ಹೊಣೆಗಾರಿಕೆ ಇರಬೇಕು. ಸಮಾಜಕ್ಕೆ ಒಳ್ಳೆಯ ಮಾಹಿತಿಗಳನ್ನು ನೀಡುವ ವ್ಯವಸ್ಥೆ ಇರಬೇಕು. ಪೈಪೋಟಿ ಹೆಚ್ಚಾಗಿದ್ದು ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವತ್ತ  ಮಾದ್ಯಮಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪ ಎದುರಾಗುತ್ತಿದೆ ಇದು ದೂರಾಗಬೇಕು.  ಗ್ರಾಮೀಣ ಪತ್ರಕರ್ತರಿಗೆ ತರಬೇತಿಯ ಅವಶ್ಯಕತೆ ಹೆಚ್ಚಿದೆ. ಹಾಡಿಗಳ ಸಮಸ್ಯೆಗಳ ಬಗ್ಗೆ ಪ್ರಶಸ್ತಿ ಪಡೆಯುವ ಪತ್ರಕರ್ತರನ್ನು ನಾವು ನೋಡುತ್ತಿದ್ದೇವೆ ಆದರೆ ಅವರಿಗೆ ಸೌಲಭ್ಯ ಒದಗಿಸಿದ ಮನಶಾಂತಿ ಪತ್ರಕರ್ತರಿಗೆ ದೊರೆಕಬೇಕಿದೆ ಎಂದು ತಿಳಿಸಿದರು.
ಹಾಡಿಯ ಮುಖಂಡ ರಾಜೇಶ್ ಸಮಾಜದ ಕಟ್ಟಕಡೆಯ ಸ್ಥಿತಿಯಲ್ಲಿ ಇರುವ ಗಿರಿಜನರು ಮುಖ್ಯವಾಹಿನಿಗೆ ಸೇರಬೇಕಾದರು ಸಮಾಜದ ಸಂಘಟನೆಗಳ ಸಹಕಾರ ಅತ್ಯಗತ್ಯ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಪಿ.ಮಹದೇವ್, ನಿಕಟಪೂರ್ವ ಅಧ್ಯಕ್ಷ ಪಿ.ಎಸ್.ವೀರೇಶ್, ಕಾರ್ಯದರ್ಶಿಗಳಾದ ನವೀನ್‍ಕುಮಾರ್, ಆರ್.ಎಸ್.ಚನ್ನಪ್ಪ, ಪತ್ರಕರ್ತರಾದ  ಎನ್.ಪಿ.ಹರಿಶ್, ಕೆ.ಎಸ್.ಪ್ರಕಾಶ್, ಶಿವದೇವ, ಎಚ್.ಕೆ.ಮಹೇಶ್, ಮುಕುಂದ, ಜಗದೀಶ್, ವಿಜೇತಕುಮಾರ್, ಶರತ್‍ಕುಮಾರ್,ಅಶೋಕ್‍ಆಲನಹಳ್ಳಿ, ಮಾಗಳಿಶ್ರೀನಿವಾಸ್, ಮುಕುಂದ, ಕಾಂತರಾಜು, ಅಂಗನವಾಡಿ ಕಾರ್ಯಕರ್ತೆಯರಾದ ಚಂದ್ರಿಕಾ, ಸುಜಾತಾ, ಮೈನಾವತಿ, ಹಾಡಿ ಮುಖಂಡರಾದ ಅಣ್ಣಯ್ಯ, ಶಿವಣ್ಣ, ಚಂದ್ರು, ಬೇಬಿ, ಮಣಿ,  ಸೇರಿದಂತೆ ಮತ್ತಿತರರು ಹಾಜರಿದ್ದರು.  (ಆರ್.ಬಿ.ಆರ್,ಎಸ್.ಎಚ್)

Leave a Reply

comments

Related Articles

error: