ಮೈಸೂರು

ಜು.21ರಿಂದ ಆ.6 ಮೈಸೂರಿನ ಅರ್ಬನ್ ಹಾತ್ ನಲ್ಲಿ ವಸ್ತ್ರ ಉತ್ಸವ್ -2017 : ಅವಕಾಶ ಸದುಪಯೋಗಪಡಿಸಿಕೊಂಡು ನೇಕಾರರಿಗೆ ಸಹಕಾರ ನೀಡಿ : ಗಿರೀಶ್

ಮೈಸೂರು,ಜು.21:-ಜೆಎಸ್ ಎಸ್ ಮಹಾವಿದ್ಯಾಪೀಠದ ಜೆಎಸ್ ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ಕಳೆದ ಐದಾರು ವರ್ಷಗಳಿಂದ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಸ್ತ್ರ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಬಾರಿಯೂ ವಸ್ತ್ರ ಉತ್ಸವ್ -2017ನ್ನು ಜು.21ರಿಂದ ಆಗಸ್ಟ್ 6ರವರೆಗೆ ಹಮ್ಮಿಕೊಳ್ಳಲಾಗಿದ್ದು, ಶುಕ್ರವಾರ ಚಾಲನೆ ನೀಡಲಾಯಿತು.

ಕೈಮಗ್ಗ ಮತ್ತು ಜವಳಿ ಇಲಾಖೆಯ ನಿರ್ದೇಶಕ ಗಿರೀಶ್ ಚಾಲನೆ ನೀಡಿದರು. ಈ ಸಂದರ್ಭ ಬೇರೆ ರಾಜ್ಯ ಸಂಸ್ಕೃತಿಯನ್ನು ಬಿಂಬಿಸಲು ಅವಕಾಶವಿದ್ದು, ಬಹಳಷ್ಟು ನಾಗರಿಕರು ಈ ಉತ್ಸವಕ್ಕೆ ಭೇಟಿ ನೀಡಿ ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಕೈಮಗ್ಗ ನೇಕಾರರಿಗೆ, ಕುಶಲಕರ್ಮಿಗಳಿಗೆ ಸಹಕಾರ ನೀಡಬೇಕು ಎಂದರು.  ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ನಿರ್ದೇಶಕ ಡಾ.ಸಿ.ರಂಗನಾಥಯ್ಯ, ಜಂಟಿ ನಿರ್ದೇಶಕ ಬಿ.ಆರ್.ಉಮಾಕಾಂತ್, ರಂಗಾಯಣ ಉಪನಿರ್ದೇಶಕಿ ನಿರ್ಮಲಾಮಠಪತಿ, ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಮೇಳದಲ್ಲಿ ವಿವಿಧ ರಾಜ್ಯದ ಪ್ರಸಿದ್ದಧ ಹಾಗೂ ಕ್ರಿಯಾಶೀಲತೆಯುಳ್ಳ 60ಕ್ಕೂ ಹೆಚ್ಚು ನೇಕಾರರ/ಸಹಕಾರ ಸಂಘಗಳು, ಕುಶಲಕರ್ಮಿಗಳು ಭಾಗವಹಿಸುತ್ತಿದ್ದು, ತಾಉ ತಯಾರಿಸಿದ ಉತ್ಪನ್ನಗಳಾದ ಕಾಟನ್  ಮತ್ತು ರೇಷ್ಮೆ ಸೀರೆಗಳು, ಬಾಗಲ್ ಪುರ ಸೀರೆಗಳು, ಆಂಧ್ರಪ್ರದೇಶದ ಮತ್ತು ತಮಿಳುನಾಡಿನ ಸೀರೆಗಳು ಕಸೂತಿ ಮಾಡಿದ ಬೆಡ್ ಶೀಟ್ ಗಳು, ಟವಲ್ ಗಳು, ಕುಶನ್ ಕವರ್ ಗಳು, ಪರಿಸರ ಸ್ನೇಹಿ ಆಭರಣಗಳು, ಡ್ರೆಸ್ ಮೆಟಿರಿಯಲ್ ಗಳು, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಬೀಡ್ ವರ್ಕ್, ಮೆಟಲ್ ವರ್ಕ್, ಕುರ್ತಿಗಳು, ಚನಿಯಾ ಚೋಲಿ ಮತ್ತಿತರ ಆಕರ್ಷಣೀಯ ಕೈಮಗ್ಗ ವಸ್ತ್ರಗಳು, ಕರಕುಶಲ ವಸ್ತುಗಳು ನೇರವಾಗಿ ಗ್ರಾಹಕರಿಗೆ ಕೃಗೆಟುಕುವ ಬೆಲೆಯಲ್ಲಿ ದೊರೆಯಲಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: