ಮೈಸೂರು

ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ: ಬಿಜೆಪಿಯಿಂದ ಸ್ವಚ್ಛತಾ ಅಭಿಯಾನ

ಡಾ.ಬಿ.ಆರ್.ಅಂಬೇಡ್ಕರ್ ದೇಶದ ಒಬ್ಬ ಅಪ್ರತಿಮ ಮೇರು ವ್ಯಕ್ತಿಯಾಗಿದ್ದು ಅವರ ಸಾಧನೆಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಬಿಜೆಪಿಯೂ ಅವರ 125ನೇ ಜನ್ಮದಿನಾಚರಣೆಯನ್ನ ವಿಶಿಷ್ಠವಾಗಿ ಆಚರಿಸಲಿದೆ ಎಂದು ಪಕ್ಷದ ಮುಖಂಡ ಕಂದಹಳ್ಳಿ ನಂಜುಂಡಸ್ವಾಮಿ ತಿಳಿಸಿದರು.

ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯ ಅಂಗವಾಗಿ ನಡೆದ ಯಳಂದೂರು ತಾಲೂಕು ಬಿಜೆಪಿ ಎಸ್ಸಿ ಮೋರ್ಚಾದಿಂದ ಯರಗಂಬಳ್ಳಿ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನವನ್ನುದ್ದೇಶಿಸಿ ಮಾತನಾಡಿ ಅಂಬೇಡ್ಕರ್ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಸಂವಿಧಾನ ರಚಿಸಿ ಎಲ್ಲರೂ ನೆಮ್ಮದಿಯಾಗಿ ಜೀವಿಸಲು ಕಾರಣೀಭೂತರಾಗಿದ್ದಾರೆ ಎಂದು ಸ್ಮರಿಸಿ ಪ್ರತಿ ತಿಂಗಳ ದಿ.14ರಂದು ವಿಶಿಷ್ಠ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಪ್ರಸಾದ್ ಮಾತನಾಡಿದರು, ತಾಲೂಕು ಎಸ್ಸಿ ಮೋರ್ಚಾ ಅಧ್ಯಕ್ಷ ರಘು, ಪ್ರಧಾನ ಕಾರ್ಯದರ್ಶಿ ನಂಜುಸ್ವಾಮಿ, ಉಪಾಧ್ಯಕ್ಷ ನಂಜುಂಡಸ್ವಾಮಿ, ಶಶಿಧರ್ ಮಂಡಲ ಉಪಾಧ್ಯಕ್ಷ ರಾಮಸ್ವಾಮಿ, ಯುವ ಮೋರ್ಚಾ ಅಧ್ಯಕ್ಷ ಅಂಬಳೆ ಮನೋಹರ್, ಮುಖಂಡರಾದ ಅಗರ ರಾಜು, ಗ್ರಾ.ಪಂ.ಮಾಜಿ ಅಧ್ಯಕ್ಷ ಸೋಮಣ್ಣ, ಹಾಗೂ ಇತರರು ಉಪಸ್ಥಿತರಿದ್ದರು.

yelandur-photo-b-oct-16ಕೆರೆ ಹೂಳು ತೆಗೆಯಲು ಆಗ್ರಹ : ಯಳಂದೂರು ಸಮೀಪದ ಇರಸವಾಡಿ ಕೆರೆಯಲ್ಲಿ ಗಿಡಗಂಟಿಗಳು ಬೆಳೆದು ಸಾಕಷ್ಟು ಹೂಳು ತುಂಬಿತ್ತು, ಜನ ಜಾನುವಾರುಗಳಿಗೆ ನೀರಿಲ್ಲದೆ ತೊಂದರೆಯಾಗಿದ್ದು ಹೂಳು ತೆಗೆದು ಸ್ವಚ್ಚಗೊಳಿಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಲಾಯಿತು.

Leave a Reply

comments

Related Articles

error: