ಮೈಸೂರು

ವಿಜ್ಞಾನ-ತಂತ್ರಜ್ಞಾನದಲ್ಲಿ ಹೊಸ ಶೋಧಗಳು ನಡೆಯಬೇಕು: ಪ್ರೊ. ಬಿ.ಎನ್. ಸುರೇಶ್

ವಿಜ್ಞಾನ, ತಂತ್ರಜ್ಞಾನಗಳಲ್ಲಿ ಹೊಸ ಶೋಧಗಳು ನಡೆದಾಗ ಮಾತ್ರ ಸಮಾಜದಲ್ಲಿನ ತೊಂದರೆಗಳನ್ನು ನಿವಾರಿಸಲು ಸಾಧ್ಯ ಎಂದು ಇಂಡಿಯನ್ ನ್ಯಾಶನಲ್ ಅಕಾಡಮಿ ಆಫ್ ಇಂಜಿನಿಯರಿಂಗ್ ನ ಪದ್ಮಭೂಷಣ  ಪ್ರಶಸ್ತಿ ವಿಜೇತ ಪ್ರೊ.ಬಿ.ಎನ್.ಸುರೇಶ್ ಹೇಳಿದರು.

ಮೈಸೂರಿನ  ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಸೋಮವಾರ ಆಯೋಜಿಸಲಾದ 3ನೇ ಅಂತರರಾಷ್ಟ್ರೀಯ ಸ್ಟೆಮ್ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೊಸ ಶೋಧಗಳು ಉತ್ಪಾದಕತೆಯಲ್ಲಿ ಹೊಸ ತಿಳುವಳಿಕೆಗಳನ್ನು ಹುಟ್ಟುಹಾಕಿ ಸಮಾಜಕ್ಕೆ ನೆರವಾಗಲಿವೆ. ಇಂದಿನ ಯುವಜನತೆ ಸಂಶೋಧನೆ ಮತ್ತು ಹೊಸ ಶೋಧಗಳಿಗೆ ಪ್ರಾಮುಖ್ಯ ನೀಡಬೇಕು. ಯುವಜನತೆಗೆ ಪ್ರೋತ್ಸಾಹ ನೀಡಿದಲ್ಲಿ ಇನ್ನೂ ಹೆಚ್ಚಿನ ತಂತ್ರಜ್ಞಾನ ಹುಟ್ಟಬಹುದು. ಹಾಗಾದಾಗ ಮಾತ್ರ ನಾವು ಏನೇನು ಕಲ್ಪನೆಗಳನ್ನು ಕಾಣುತ್ತೇವೆಯೋ ಅವನ್ನು ವಾಸ್ತವ ರೂಪಕ್ಕೆ ತರಲು ಸಾಧ್ಯ ಎಂದರು.

ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. 25ಕೇಂದ್ರಿಯ ವಿಶ್ವವಿದ್ಯಾನಿಲಯಗಳಿವೆ. 325 ವಿಶ್ವವಿದ್ಯಾನಿಲಯಗಳಿವೆ. ಪ್ರತಿಷ್ಟಿತ ಕಾಲೇಜುಗಳಿವೆ. ಆದರೂ ವಿಜ್ಞಾನ ಪ್ರಕಾಶನದ ಕೊರತೆ ಇಲ್ಲಿದೆ. ಅದಕ್ಕೆ ಮುಖ್ಯ ಕಾರಣ ಉಪನ್ಯಾಸಕರಿಗೆ ಕೈಗಾರಿಕಾ ಸಂಸ್ಥೆಗಳ ಕುರಿತು ತಿಳುವಳಿಕೆ ಕಡಿಮೆ. ಗುಣಮಟ್ಟದ ಶಿಕ್ಷಣ ನೀಡುವ ಉಪನ್ಯಾಸಕರಿಗೆ, ಪ್ರಾಯೋಗಿಕ ಚಿಂತನೆಯುಳ್ಳ ಉಪನ್ಯಾಸಕರಿಗೆ  ಆದ್ಯತೆ ನೀಡಬೇಕಿದ್ದು, ವಿಜ್ಞಾನದ ದೃಷ್ಟಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿದಲ್ಲಿ ಸಮಸ್ಯೆ ಬಗೆ ಹರಿಸಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪುಣೆಯ ಸುಧಾರಿತ ರಕ್ಷಣಾ ತಂತ್ರಜ್ಞಾನ ವಿವಿ ಕುಲಪತಿ ಪೈ, ಮಲೇಷ್ಯಾ ವಿಶ್ವವಿದ್ಯಾನಿಲಯದ ಪ್ರೊ.ನಾಡೆರ್ ಬರಸಮ್, ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: