ಮೈಸೂರು

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ: ಟಿ. ಮಹದೇವಸ್ವಾಮಿ

ಪರಿಸರವನ್ನು ಸ್ವಚ್ಛವಾಗಿ ಹಾಗೂ ಸುಂದರವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಪ್ರಜ್ಞಾನವಂತ ನಾಗರೀಕರು ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಟಿ. ಮಹದೇವಸ್ವಾಮಿ ಅಭಿಪ್ರಾಯಪಟ್ಟರು.

ಅವರು, ಇಂದು (ಅ.17)ರಂದು ಕರ್ನಾಟಕ ಪರಿಸರ ಜಾಗೃತಿ ವೇದಿಕೆಯ 31ನೇ ವಾರದ ಕಾರ್ಯಕ್ರಮವಾಗಿ ತಿ. ನರಸೀಪುರ ತಾಲೂಕು ಘಟಕದ ನೆರಗ್ಯಾತನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಸಿ ನೆಡುವೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಮುಂದಿನ ಪೀಳಿಗೆಗೆ ಸ್ವಚ್ಚ ಹಾಗೂ ಶುದ್ಧ ಪರಿಸರ ನೀಡಬೇಕಾದ ಕರ್ತವ್ಯ ಎಲ್ಲರ ಜವಾಬ್ದಾರಿಯಾಗಿದ್ದು ಅದರ ಮೂಲಕ ಸಮಾಜದ ಆರೋಗ್ಯವನ್ನು ಕಾಪಾಡಬೇಕು ಎಂದು ಕರೆ ನೀಡಿದರು.

ವಂದೇ ಮಾತರಂ ಫೌಂಡೇಷನ್ ಅಧ್ಯಕ್ಷ ಮಹೇಶ್ ಕಾಮತ್ ಮಾತನಾಡಿ ಪ್ಲಾಸ್ಟಿಕ್ ಮುಕ್ತ ರಾಜ್ಯವಾಗಬೇಕೆಂದರೆ ಅದರಿಂದಾಗುವ ಹಾನಿಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು. ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಎಸ್.ಪಿ. ಮಹದೇವಸ್ಥಾಮಿಯನ್ನು ನೇಮಕ ಮಾಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮ.ನ. ಲತಾಮೋಹನ್, ಜಗನ್ನಾಥ್, ನಾಗೇಶ್, ಲೋಕಮಣಿ ವಿವೇಕ್, ಸೂರ್ಯಕುಮಾರ್, ಚೇತನ್, ಎಕೆಪಿಜೆವಿಯ ಪದಾಧಿಕಾರಿಗಳಾದ ಪ್ರೊ. ಜಗದೀಶ್, ಟಿ.ಎಲ್. ಲೋಕೇಶ್, ಸುನೀಲ್ ಆರಾಧ್ಯ, ಮಹೇಶ್, ಮಾಯಿಗ ಶೆಟ್ಟಿ, ಕೇಶವಮೂರ್ತಿ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: