
ಕರ್ನಾಟಕಪ್ರಮುಖ ಸುದ್ದಿ
ಫೇಸ್ಬುಕ್ ನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅಶ್ಲೀಲ ಫೋಟೊ ಶೇರ್ ಮಾಡಿದ ಯುವಕನ ವಿರುದ್ಧ ದೂರು
ರಾಜ್ಯ(ಕೊಪ್ಪಳ)ಜು.21:- ಫೇಸ್ಬುಕ್ ನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅಶ್ಲೀಲ ಫೋಟೊ ಶೇರ್ ಮಾಡಿದ ಯುವಕನ ವಿರುದ್ಧ ಗಂಗಾವತಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಆಜಾದ್ ಪಠಾಣ ಫೋಟೊ ಶೇರ್ ಮಾಡಿರುವ ಯುವಕನಾಗಿದ್ದು, ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಫೋಟೊ ಸೇರಿಸಿ ಅಶ್ಲೀಲ ಗೊಳಿಸಿರುವ ಫೋಟೊ ಶೇರ್ ಮಾಡಿದ್ದಾನೆ. ಗಂಗಾವತಿ ಬಿಜೆಪಿ ನಗರ ಘಟಕ ಯುವ ಮೋರ್ಚಾ ಅಧ್ಯಕ್ಷ ನವೀನ್ ಮಾಲಿಪಾಟೀಲ್ ದೂರಿನನ್ವಯ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)