ಮೈಸೂರು

ಬನ್ನೂರಿನಲ್ಲಿ ಅಪರಿಚಿತ ಶವ ಪತ್ತೆ

ಮೈಸೂರು,ಜು.22:-ತಿ.ನರಸೀಪುರ ತಾಲೂಕಿನ  ಬನ್ನೂರಿನಲ್ಲಿ ಅಪರಿಚಿತ ಶವವೊಂದು  ಪತ್ತೆಯಾಗಿದೆ.
ಸುಮಾರು 50 ವರ್ಷ ವಯಸ್ಸಿನ ಗಂಡಸಿನ ಮೃತ ದೇಹ ಪತ್ಯಾಗಿದ್ದು, ಬನ್ನೂರಿನ ರತ್ನಮಹಲ್ ಚಿತ್ರ ಮಂದಿರದ ಪಂಚರ್ ಅಂಗಡಿಯ ಮುಂದೆ ಅಪರಿಚಿತ ವ್ಯಕ್ತಿಯ ಶವ ಬಿದ್ದಿದೆ. ಜನಜಂಗುಳಿ ಇರುವ ಪ್ರದೇಶದಲ್ಲಿ ಶವ ಬಿದ್ದಿದ್ದರೂ ಮಾನವೀಯತೆ ಮರೆತ ಜನ  ನೋಡಿ ಸಾಗುತ್ತಿದ್ದಾರೆ. ಸಾಕಷ್ಟು ಬಾರಿ ದೂರವಾಣಿ ಮೂಲಕ ವಿಷಯ ಮುಟ್ಟಿಸಿದರೂ ಪೊಲೀಸರು ಬೇಜವಾಬ್ದಾರಿತನ ತೋರಿದ್ದು  ಸ್ಥಳಕ್ಕೆ ಬಂದಿಲ್ಲ ಎನ್ನಲಾಗಿದೆ. ⁠⁠⁠(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: