ಮೈಸೂರು

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಮೈಸೂರು, ಜು.೨೨: ಮುಡಾ ವತಿಯಿಂದ ವಿಜಯನಗರ ೩ನೇ ಹಂತ ಜಿ ಬ್ಲಾಕ್ ಬಡಾವಣೆಯ ಒಳಚರಂಡಿ ೧೫೦ ಎಂ.ಎಂ ವ್ಯಾಸದ ಬದಲಿಗೆ ೩೦೦ ಎಂ.ಎಂ ವ್ಯಾಸದ ಪೈಪನ್ನು ಅಳವಡಿಸುವ ಕಾಮಗಾರಿಗೆ ಶಾಸಕ ಜಿ.ಟಿ.ದೇವೇಗೌಡ ಶನಿವ್ರಾ ಗುದ್ದಲಿ ಪೂಜೆ ನೆರವೇರಿಸಿದರು.
ಇದಲ್ಲದೆ ಹುಣಸೂರು ಮುಖ್ಯರಸ್ತೆಯ ಪೆಟ್ರೋಲ್ ಬಂಕ್ ಪಕ್ಕದ ರಸ್ತೆಯನ್ನು ಜಯಮ್ಮ ಮತ್ತು ನಟರಾಜು ಮನೆಯವರೆಗೆ ಅಭಿವೃದ್ಧಿಪಡಿಸಿ ಡಾಂಬರ್ ಹಾಗೂ ಚರಂಡಿ ನಿರ್ಮಾಣ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ದೊರೆಯಿತು.
ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್, ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರ ಅರುಣ್ ಕುಮಾರ್, ಸಹಾಯಕ ಅಭಿಯಂತರರುಗಳಾದ ಆನಂದ್, ಲೋಹಿತ್, ಪ್ರಾಧಿಕಾರದ ಸದಸ್ಯ ಶಿವಮಲ್ಲು, ಸ್ಥಳೀಯ ಮುಖಂಡರಾದ ರಾಜು, ಕೆಂಪನಾಯಕ ಸೇರಿದಂತೆ ಇನ್ನಿತರರು ಹಾಜರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: