ಪ್ರಮುಖ ಸುದ್ದಿಮೈಸೂರು

ತಮಿಳುನಾಡಿಗೆ ನೀರು ಹರಿಸುತ್ತಿರುವುದಕ್ಕೆ ವಿರೋಧ : ನಾಲೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿ ನೀರಿಗಿಳಿದು ಪ್ರತಿಭಟನೆ

ಮೈಸೂರು,ಜು.22:- ರಾಜ್ಯ ಕಬ್ಬು ಬೆಳೆಗಾರರ ಸಂಘದ ಟಿ.ನರಸೀಪುರ ತಾಲೂಕು ಘಟಕ ಕಾರ್ಯಕರ್ತರು  ನೀರಿಗಿಳಿದು ಪ್ರತಿಭಟನೆ ನಡೆಸಿದರು.

ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ನದಿ ನೀರು ಬಿಡುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ  ಮೂಗೂರು ಪ್ರಕಾಶ್ ನದಿಯ ಮಧ್ಯಕ್ಕೆ ಜಿಗಿದರು.  ಇದರಿಂದ ಸ್ಥಳದಲ್ಲಿ  ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರಿಂದ ಯಾವುದೇ ಅಹಿತಕರ ನಡೆಯಲಿಲ್ಲ. ವೃತ್ತ ನಿರೀಕ್ಷಕ ಮನೋಜ್ ಕುಮಾರ್ ವಹಿಸಿದ್ದ  ಮುನ್ನೆಚ್ಚರಿಕೆ ವಹಿಸಿದ್ದರು. ನೀರು ನಿಲ್ಲಿಸುವವರೆಗೂ ನೀರಿನಿಂದ ಮೇಲಕ್ಕ ಬರುವುದಿಲ್ಲ  ಎಂದು ರೈತರು ಹೇಳಿದ್ದು, ನೀರಾವರಿ ಇಲಾಖೆ ಇಂಜಿನಿಯರ್ ಮಹೇಶ್ ಕುಮಾರ್ ಸ್ಥಳಕ್ಕಾಗಮಿಸಿ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ನಾಲೆಗಳಿಗೆ ನೀರು ಹರಿಸುವಂತೆ ಕ್ರಮವಹಿಸುವುದಾಗಿ ಭರವಸೆ ನೀಡಿದರು .ಭರವಸೆಗೂ  ಜಗ್ಗದ ರೈತರು ನೀರು ನಿಲ್ಲಿಸುವವರೆಗೆ ಮೇಲೆ ಬರುವುದಿಲ್ಲವೆಂಬ ಖಡಖ್ ಎಚ್ಚರಿಕೆಯನ್ನು ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: