ಪ್ರಮುಖ ಸುದ್ದಿ

ಜೆಡಿಎಸ್ ಗೆದ್ದರೆ ಜಮೀರ್ ಅಹ್ಮದ್ ತಲೆ ಕತ್ತರಿಸಿ ಕೊಳ್ಳುತ್ತಾರಂತೆ…!

ಪ್ರಮುಖ ಸುದ್ದಿ, ಬೆಂಗಳೂರು, ಜು.೨೨: ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್ ಖಾನ್ ಹೊಸ ಸವಾಲೊಂದನ್ನು ಹಾಕಿದ್ದು, ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆದ್ದರೆ ನನ್ನ ತಲೆ ಕತ್ತರಿಸಿ ಇಡುತ್ತೇನೆ ಬಹಿರಂಗ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಠೇವಣಿ ಕೂಡ ಸಿಗುವುದಿಲ್ಲ. ಒಂದು ವೇಳೆ ಗೆದ್ದರೆ ನನ್ನ ತಲೆ ಕತ್ತರಿಸಿ ಇಡುತ್ತೇನೆ. ನಾನು ಎಂದೂ ದೇವೇಗೌಡರನ್ನು ಬೈದಿಲ್ಲ. ಅವರ ಬಗ್ಗೆ ವಿಶೇಷ ಗೌರವವಿದೆ. ನಾನು ಎಂದೂ ಕೀಳು ಮಟ್ಟದ ರಾಜಕಾರಣ ಮಾಡಿಲ್ಲ. ಜನ ನನ್ನ ಮುಖ ನೋಡಿ ಮತ ಹಾಕಿದ್ದಾರೆ. ಕ್ಷೇತ್ರದ ಜನ ದೇವೇಗೌಡರ ಬದಲು ನನ್ನನ್ನು ಇಷ್ಟಪಡುತ್ತಾರೆ. ನನ್ನನ್ನು ಮನೆಮಗ ಎಂದು ಭಾವಿಸಿದ್ದಾರೆ. ಚುನಾವಣೆ ವೇಳೆ ಮನೆ, ಮನೆಗೆ ಹೋಗಿ ಜೆಡಿಎಸ್‌ಗೆ ಮತ ಕೊಡಿ ಎಂದು ಕೇಳಿಕೊಂಡಿದ್ದೆ. ಹಾಗಾಗಿ ಜನ ಜೆಡಿಎಸ್‌ಗೆ ಮತ ಹಾಕಿದರು ಎಂದು ಹೇಳಿದರು. (ವರದಿ ಬಿ.ಎಂ)

Leave a Reply

comments

Related Articles

error: