ಮೈಸೂರು

ಬೆಟ್ಟದಪುರ ಉಪನೋಂದಣಾಧಿಕಾರಿ ಎಸಿಬಿ ಬಲೆಗೆ

ಖಚಿತ ಮಾಹಿತಿಯ ಮೇರೆಗೆ ಮೈಸೂರು ಭ್ರಷ್ಟಾಚಾರ ನಿಗ್ರಹದಳ ಬೆಟ್ಟದಪುರ ಉಪನೋಂದಣಾಧಿಕಾರಿ ಕಚೇರಿ ಮೇಲೆ ದಾಳಿ ನಡೆಸಿದ್ದು, ಯಾವುದೇ ದಾಖಲೆಗಳಿಲ್ಲದ 52ಸಾವಿರ ರೂ.ನಗದನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಎಸಿಬಿ ಪೊಲೀಸರ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ  ಉಪನೋಂದಣಾಧಿಕಾರಿ ನಾಗೇಂದ್ರಕುಮಾರ್  ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಓಂರಾಜ್ ಮತ್ತು ನಿಶಾಂತ್ ಇಬ್ಬರು ಮಧ್ಯವರ್ತಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಅವರಿಂದ 52ಸಾವಿರ ರೂ.ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಸಾರ್ವಜನಿಕರ ದೂರಿನ ಮೇರೆಗೆ ಈ ದಾಳಿ ನಡೆದಿದ್ದು, ಸ್ಥಳದಲ್ಲಿ ಮೂವರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.

ದಾಳಿಯಲ್ಲಿ ಭ್ರಷ್ಟಾಚಾರ ನಿಗ್ರಹದಳದ ವೃತ್ತ ನಿರೀಕ್ಷಕ ಪಿ.ಎನ್.ಅನಿಲ್ ಕುಮಾರ್, ವಿನಯ್ ಕುಮಾರ್, ಸಿಬ್ಬಂದಿಗಳಾದ ನೇತ್ರಾವತಿ, ಕುಮಾರ್ ಆರಾಧ್ಯ, ರಾಘವೇಂದ್ರ ಪಾಲ್ಗೊಂಡಿದ್ದರು.

Leave a Reply

comments

Related Articles

error: