ದೇಶ

ಮುಂದಿನ 48 ಗಂಟೆಗಳಲ್ಲಿ ಒಡಿಶಾದಲ್ಲಿ ಭಾರೀ ಮಳೆ!

ದೇಶ,(ಒಡಿಶಾ),ಜು.22: ಮುಂದಿನ 48 ಗಂಟೆಗಳಲ್ಲಿ ಉತ್ತರ ಒಡಿಶಾದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ 48 ತಾಸುಗಳಲ್ಲಿ ಉತ್ತರ ಒಡಿಶಾದ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗಲಿದೆ; ಜು.26ರ ತನಕವೂ ಉತ್ತರ ಪ್ರಾಂತ್ಯದಲ್ಲಿ ಜಿಡಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಇಲಾಖೆ ತಿಳಿಸಿದೆ.

ಜುಲೈ 15ರಿಂದ ಒಡಿಶಾದಲ್ಲಿ, ವಿಶೇಷವಾಗಿ ಕಟಕ್ ಮತ್ತು ಭುವನೇಶ್ವರದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ತಗ್ಗು ಪ್ರದೇಶಗಳೆಲ್ಲ ಜಲಾವೃತವಾಗಿವೆ. ಪರಿಣಾಮವಾಗಿ ಸರ್ಕಾರ ಜಿಲ್ಲಾಡಳಿತಗಳಿಗೆ ಮುನ್ನೆಚ್ಚರಿಕೆ ನೀಡಿದೆ. (ವರದಿ: ಎಲ್.ಜಿ)

Leave a Reply

comments

Related Articles

error: